Advertisement

ಎರಡನೇ ದಿನ 55 ಸಾವಿರ ಜನ ಭೇಟಿ

11:56 AM Aug 06, 2018 | |

ಬೆಂಗಳೂರು: ಲಾಲ್‌ಬಾಗ್‌ ಫ‌ಲಪುಷ್ಪ ಪ್ರದರ್ಶನದ ಎರಡನೇ ದಿನವಾದ ಭಾನುವಾರ ಬೆಳಗ್ಗೆ ಏಳು ಗಂಟೆಯಿಂದಲೇ ಸಸ್ಯಕಾಶಿಯತ್ತ ಜನ ದಾಪುಗಾಲು ಹಾಕಿದ್ದು, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೂಗಳಿಂದ ನಿರ್ಮಿಸಿದ ಸೇನಾ ಸ್ಮಾರಕಗಳಿಗೆ ನಮನ ಸಲ್ಲಿಸಿದರು.

Advertisement

ಪ್ರದರ್ಶನ ಆರಂಭವಾಗಿ 2ದಿನದಲ್ಲಿ ಒಟ್ಟು 37.53 ಲಕ್ಷ ರೂ. ಸಂಗ್ರಹವಾಗಿದೆ. ಶನಿವಾರ 14,700 ಜನ ಭೇಟಿ ನೀಡಿ 8.29ಲಕ್ಷ ರೂ. ಸಂಗ್ರಹವಾಗಿತ್ತು. ಭಾನುವಾರ 55 ಸಾವಿರ ಜನ ವೀಕ್ಷಣೆ ಮಾಡಿದ್ದು, 29.24ಲಕ್ಷ ರೂ. ಸಂಗ್ರಹವಾಗಿದೆ. ಆ. 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಸಾರ್ವಜನಿಕರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ತೊಂದರೆ ಇಲ್ಲದೆ ಜನರು ಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಲಾಲ್‌ಬಾಗ್‌ ಉಪ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next