ಬೆಂಗಳೂರು: ಬೆಂಗಳೂರು ಜಲಮಂಡಳಿಯ ವತಿಯಿಂದ ನ.7ರಂದು ಬೆಳಗ್ಗೆ 9.30 ರಿಂದ 11 ಗಂಟೆಯವರೆಗೆ ನಗರದ ಪಶ್ಚಿಮ-1, ಆಗ್ನೇಯ-1 ಹಾಗೂ ನೈರುತ್ಯ-1 ಉಪವಿಭಾಗಳಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಪಶ್ಚಿಮ-1 ಉಪವಿಭಾಗದ ವ್ಯಾಪ್ತಿಯ ಮಾಗಡಿ ರಸ್ತೆ 12, ಹೊಸಹಳ್ಳಿ ಪಂಪ್‌ಹೌಸ್, ಮೈಸೂರು ರಸ್ತೆ ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅರ್ಕಾವತಿ ಭವನ, 9ನೇ ಅಡ್ಡರಸ್ತೆ, ಆರ್‌ಪಿಸಿ ಬಡಾವಣೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಮಾಹಿತಿಗಾಗಿ ಪಶ್ಚಿಮ 22349171 ಅಥವಾ ಪಶ್ಚಿಮ (1) ಉಪವಿಭಾಗದ ಎಂಜಿನಿಯರ್‌ಗಳನ್ನು ಸಂಪರ್ಕಿಸಬಹುದು.
ಆಗ್ನೇಯ-1 ಉಪವಿಭಾಗದ ವ್ಯಾಪ್ತಿಯ ಹಲಸೂರು, ದೊಮ್ಮಲೂರು, ಸಿಎಲ್‌ಆರ್, ಜಾನ್ಸನ್ ಮಾರುಕಟ್ಟೆ ಸೇವಾ ಠಾಣೆ ವ್ಯಾಪ್ತಿಗೆ ಸಮಸ್ಯೆಗಳನ್ನು ಹಳೆ ಮದ್ರಾಸ್ ರಸ್ತೆಯ ಲಿಡೋ ಮಾಲ್ ಎದುರಿನ ಸಹಾಯಕ ನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಪರಿಹರಿಸಿಕೊಳ್ಳಬಹುದಾಗಿದ್ದು, ಮಾಹಿತಿಗಾಗಿ ಆಗ್ನೇಯ 22945169 ಸಂಪರ್ಕಿಸಬಹುದು.
ನೈರುತ್ಯ-1 ಉಪವಿಭಾಗದ ವಿ.ವಿ.ಪುರ, ಸುಧಾಮನಗರ -2, ಕೆಂಪೇಗೌಡನಗರ, ಜಗಜೀವನ ರಾಂನಗರ, ಚಾಮರಾಜಪೇಟೆ ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳನ್ನು ವಿ.ವಿ.ಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೈರುತ್ಯ-1 ಕಚೇರಿಯಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ.
ಮಾಹಿತಿಗಾಗಿ ನೈರುತ್ಯ 22238888 ಅಥವಾ 22945193 ಸಂಪರ್ಕಿಸಬಹುದಾಗಿದೆ. ಇದರೊಂದಿಗೆ ದೂರವಾಣಿ 22238888 ಅಥವಾ ಸಹಾಯವಾಣಿ 1916 ಹಾಗೂ ವಾಟ್ಸ್‌ಆಪ್ ಸಂಖ್ಯೆ 876222888ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.