Advertisement

Hoax bomb calls; ಕ್ರಮ ತೆಗೆದುಕೊಳ್ಳಲಾಗುತ್ತಿದೆ:ಸಚಿವ ರಾಮ್ ಮೋಹನ್ ನಾಯ್ಡು

07:07 PM Oct 17, 2024 | Team Udayavani |

ಹೊಸದಿಲ್ಲಿ: ವಿವಿಧ ವಿಮಾನಗಳಿಗೆ ಇತ್ತೀಚೆಗೆ ನಿರಂತರವಾಗಿ ಹುಸಿ ಬಾಂಬ್ ಕರೆಗಳ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾವು ಯಾವುದೇ ರೀತಿಯ ಪಿತೂರಿಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಆದರೆ ಈ ಕರೆಗಳು ಎಲ್ಲಿಂದ ಬರುತ್ತಿವೆ ಎಂದು ನಮಗೆ ಸ್ವಲ್ಪಮಟ್ಟಿಗೆ ನಮಗೆ ತಿಳಿದಿದೆ” ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಗುರುವಾರ(ಅ17) ಪ್ರತಿಕ್ರಿಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ”ಕೆಲವು ಅಪ್ರಾಪ್ತ ವಯಸ್ಕರು ಮತ್ತು ಕುಚೇಷ್ಟೆಗಾರರು ಮಾಡುತ್ತಿದ್ದು,ಯಾವುದೇ ರೀತಿಯ ಪಿತೂರಿ ಇಲ್ಲ, ನಾವು ಏರ್‌ಲೈನ್ಸ್, ಭದ್ರತಾ ಏಜೆನ್ಸಿಗಳೊಂದಿಗೆ ಮಾತನಾಡುತ್ತಿದ್ದೇವೆ. ಸಚಿವಾಲಯದಲ್ಲಿಯೂ ಸಮಾಲೋಚನೆ ನಡೆಯುತ್ತಿದೆ” ಎಂದರು.

ನಮ್ಮ ಕಡೆಯಿಂದ, ನಾವು ಏನು ಮಾಡಬಹುದು ಎಂಬುದನ್ನು ನಾವು ನೋಡಲಿದ್ದೇವೆ. ನಾವು ಸಚಿವಾಲಯದೊಳಗಿನ ವಿಮಾನಯಾನ ಸಂಸ್ಥೆಗಳು, ಭದ್ರತಾ ಏಜೆನ್ಸಿಗಳೊಂದಿಗೆ ಮಾತನಾಡುತ್ತಿದ್ದೇವೆ. ಸಮಾಲೋಚನೆಗಳು ನಡೆಯುತ್ತಿವೆ” ಎಂದು ಸಚಿವ ಹೇಳಿಕೆ ನೀಡಿದ್ದಾರೆ.

ಗಂಭೀರವಾದ ವಿಷಯ
ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ “ಬಾಂಬ್ ಬೆದರಿಕೆಗಳು ಬಹಳ ಗಂಭೀರವಾದ ವಿಷಯವಾಗಿದೆ. ವಿದೇಶಾಂಗ ಇಲಾಖೆ ಸೇರಿದಂತೆ ನಮ್ಮ ಸಂಬಂಧಿತ ಏಜೆನ್ಸಿಗಳು ಈ ವಿಷಯವನ್ನು ಪರಿಶೀಲಿಸುತ್ತಿವೆ. ಕೆಲವು ಎಫ್‌ಐಆರ್‌ಗಳನ್ನು ಸಹ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.

ನಿರಂತರ ಹುಚ್ಚಾಟ
ದೇಶದ ವಿವಿಧೆಡೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ 20 ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಕರೆ ಬಂದಿದ್ದು, ಹಾರಾಟದ ಮೇಲೆ ಪರಿಣಾಮ ಬೀರಿತ್ತು. ಪೊಲೀಸರು ಕಾರ್ಯಪ್ರವೃತ್ತರಾಗಿ ಅಪ್ರಾಪ್ತ ವಯಸ್ಕನೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಠಿನ ಕ್ರಮಕ್ಕೆ ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next