Advertisement

Tragic: Escalators ಅವಾಂತರ-ತಂದೆಯ ಹೆಗಲ ಮೇಲಿದ್ದ ಕಂದಮ್ಮ ಜಾರಿಬಿದ್ದು ಮೃತ್ಯು

12:19 PM Mar 20, 2024 | Team Udayavani |

ರಾಯ್ಪುರ್(ಚತ್ತೀಸ್‌ ಗಢ್):‌ ಸಾವು ಎಲ್ಲಿ, ಹೇಗೆ ಸಂಭವಿಸುತ್ತದೆ ಎಂಬುದು ಊಹಿಸಲು ಅಸಾಧ್ಯ. ಅದಕ್ಕೊಂದು ಸೇರ್ಪಡೆ ಎಂಬಂತೆ ಎಸ್ಕ್‌ ಲೇಟರ್‌ ಹತ್ತುವ ವೇಳೆ ಆಯತಪ್ಪಿದ ಪರಿಣಾಮ ತಂದೆಯ ಹೆಗಲ ಮೇಲೆ ಮಲಗಿದ್ದ ಪುಟ್ಟ ಕಂದಮ್ಮ ಹೆಗಲಿನಿಂದ ಜಾರಿ ಕೆಳಗೆ ಬಿದ್ದು ಕೊನೆಯುಸಿರೆಳೆದಿರುವ ದಾರುಣ ಘಟನೆ ಚತ್ತೀಸ್‌ ಗಢದ ರಾಯ್ಪುರ್‌ ನ ಶಾಪಿಂಗ್‌ ಮಾಲ್‌ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:

ರಾಯ್ಪುರ್‌ ಸಿಟಿ ಸೆಂಟರ್‌ ಮಾಲ್‌ ನಲ್ಲಿದ್ದ ಸಿಸಿಟಿವಿ ಫೂಟೇಜ್‌ ನಲ್ಲಿ, ಎಸ್ಕ್‌ ಲೇಟರ್ಸ್‌ ಮೇಲೆ ವ್ಯಕ್ತಿಯೊಬ್ಬ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದು, ಮತ್ತೊಬ್ಬ ವ್ಯಕ್ತಿ ಹಾಗೂ ಐದು ವರ್ಷದ ಮಗುವೊಂದು ನಿಂತಿತ್ತು. ಈ ಸಂದರ್ಭದಲ್ಲಿ ಐದು ವರ್ಷದ ಮಗುವನ್ನು ತಡೆಯಲು ಹೋದ ಸಂದರ್ಭದಲ್ಲಿ ಆಯತಪ್ಪಿದ ಪರಿಣಾಮ ಹೆಗಲ ಮೇಲಿದ್ದ ಮಗು ಜಾರಿ ಕೆಳಗೆ ಬಿದ್ದಿರುವ ದೃಶ್ಯ ಸೆರೆಯಾಗಿದೆ.


ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು ಆದರೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ತಕ್ಷಣವೇ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

ಈ ಘಟನೆ ಬಗ್ಗೆ ದೇವೇಂದ್ರ ನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಮಗುವನ್ನು ಕಳೆದುಕೊಂಡ ಕುಟುಂಬ ಸದಸ್ಯರ ರೋಧನ ಮುಗಿಲುಮುಟ್ಟಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next