Advertisement
ಕಾರ್ಯಸೂಚಿಗಳೇನು?– ನೇಪಾಲ ಪ್ರಧಾನಿ ಶೇರ್ ಬಹಾದ್ದೂರ್ ದೇಬಾ ಜತೆ ದ್ವಿಪಕ್ಷೀಯ ಮಾತುಕತೆ.
– ಮಾಯಾದೇವಿ ದೇಗುಲದಲ್ಲಿ ಪೂಜೆ.
– ಲುಂಬಿನಿಯಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಭಾರತೀಯ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಶಿಲಾನ್ಯಾಸ.
– ವಿವಿಧ ಒಪ್ಪಂದಗಳಿಗೆ ಸಹಿ.
– ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಭಾಗಿ. ನೇಪಾಲ ಮತ್ತು ಭಾರತೀಯ ನಾಗರಿಕರನ್ನು ಉದ್ದೇಶಿಸಿ ಭಾಷಣ.
– ಭಾರತ-ನೇಪಾಲ ಬಾಂಧವ್ಯ ವೃದ್ಧಿಯ ಮೂಲಕ ಚೀನದ ಪ್ರಾಬಲ್ಯ ತಡೆಗೆ ಯತ್ನಿಸುವುದು.
-ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವುದು.
– ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಾಡುವುದು.
– ಬುದ್ಧಿಸಂ ನೊಂದಿಗೆ ಭಾರತದ ಜಾಗತಿಕ ಸಂಬಂಧವನ್ನು ಪುನಃಶ್ಚೇತನ ಗೊಳಿಸುವುದು. ಚೀನ ಪ್ರಾಬಲ್ಯ ತಗ್ಗಿಸುವ ಯತ್ನ
ನೇಪಾಲದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನವು “ಸಾಫ್ಟ್ ಬುದ್ಧಿಸಂ’ ಧೋರಣೆ ಅನುಸರಿ ಸುತ್ತಿದೆ. ಈಗಾಗಲೇ ಆ ದೇಶದಲ್ಲಿ ಚೀನ ಭಾರೀ ಪ್ರಮಾಣದ ಹೂಡಿಕೆಯನ್ನೂ ಮಾಡಿದೆ. ಹೀಗಾಗಿ ಮಾಜಿ ಪ್ರಧಾನಿ ಓಲಿ ಅವಧಿಯಲ್ಲಿ ಹದಗೆಟ್ಟಿದ್ದ ಭಾರತ-ನೇಪಾಲ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸಿ ಚೀನದ ಪ್ರಾಬಲ್ಯವನ್ನು ತಗ್ಗಿಸುವುದು ಭಾರತದ ಉದ್ದೇಶವಾಗಿದೆ.
Related Articles
Advertisement