ಢಾಕಾ: ಜಿಂಬಾಬ್ವೆ ಪ್ರವಾಸದಿಂದ ವಾಪಸಾದ ಬಾಂಗ್ಲಾದೇಶ ವನಿತಾ ಕ್ರಿಕೆಟ್ ತಂಡದ ಇಬ್ಬರಲ್ಲಿ ಒಮಿಕ್ರಾನ್ ಕೇಸ್ ಕಂಡುಬಂದಿದೆ ಎಂದು ದೇಶದ ಕುಟುಂಬ ಕಲ್ಯಾಣ ಸಚಿವ ಜಾಹಿದ್ ಮಾಲೆಕ್ ತಿಳಿಸಿದ್ದಾರೆ.
“ಬಾಂಗ್ಲಾದ ಆರೋಗ್ಯ ಮಾರ್ಗಸೂಚಿಯಂತೆ ಅವರನ್ನು ಎರಡು ವಾರ ಕ್ವಾರಂಟೈನ್‌ನಲ್ಲಿ ಇಡಲಾಗುವುದು. ಇವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪತ್ತೆಮಾಡಿ ಪರೀಕ್ಷಿಸಲಾಗುವುದು’ ಎಂದು ಮಾಲೆಕ್ ಹೇಳಿದರು.
2022ರ ವನಿತಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ತಂಡ ಜಿಂಬಾಬ್ವೆಗೆ ತೆರಳಿತ್ತು. ಡಿ. ಮೊದಲ ವಾರ ತವರಿಗೆ ಮರಳಿದ ಈ ತಂಡದಲ್ಲಿ ಎರಡು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದದ್ದು ಈ ಮೊದಲು ಸುದ್ದಿಯಾಗಿತ್ತು.
ಇದನ್ನೂ ಓದಿ:ಜಮ್ಮು ಸರ್ಕಾರದ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿ
ಈ ಆಟಗಾರ್ತಿಯರಿಗೇ ಒಮಿಕ್ರಾನ್ ಅಂಟಿಕೊಂಡಿದೆಯೇ ಎಂಬುದು ಖಚಿತಗೊಂಡಿಲ್ಲ. 5 ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕ ಡಿ. 6ರಂದು ವನಿತಾ ತಂಡ ಹೊಟೇಲನ್ನು ತೊರೆಯಬೇಕಿತ್ತು.
ಆದರೀಗ ಇವರ ಕ್ವಾರಂಟೈನ್ ಅವಧಿ ಮುಂದುವರಿದಿದೆ.