Advertisement

ಸಮುದಾಯಕ್ಕೆ ಒಮಿಕ್ರಾನ್‌ ; ದಿಲ್ಲಿ, ಮುಂಬಯಿಯಲ್ಲಿ ಹಲವು ಮಾದರಿ ಪರೀಕ್ಷೆಯಲ್ಲಿ ದೃಢ

11:01 PM Dec 31, 2021 | Team Udayavani |

ಹೊಸದಿಲ್ಲಿ: ದೇಶದ ರಾಜಧಾನಿ ಹೊಸದಿಲ್ಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಒಮಿಕ್ರಾನ್‌ ನಿರೀಕ್ಷೆಗಿಂತಲೂ ಹೆಚ್ಚು ಹರಡಿದೆ ಎಂದು ಹೇಳಲಾ ಗುತ್ತಿದೆ. ಮುಂಬಯಿಯಲ್ಲಿ ಡಿ.21 ಮತ್ತು ಡಿ.22 ರಂದು ಸಂಗ್ರಹಿಸಲಾಗಿದ್ದ 375 ಮಂದಿಯ ಮಾದ ರಿಯ ಪೈಕಿ 141 ಮಂದಿಗೆ (ಶೇ.37) ಒಮಿಕ್ರಾನ್‌ ದೃಢ ಪಟ್ಟಿದೆ.

Advertisement

ರೂಪಾಂತರಿ ದೃಢಪಟ್ಟ ಯಾರೂ ವಿದೇಶ ಪ್ರಯಾಣ ಮಾಡಿಯೇ ಇಲ್ಲ ಎನ್ನುವುದು ಗಮ ನಾರ್ಹ. ಈ ಪೈಕಿ 89 ಮಂದಿ ಪುರುಷರು ಮತ್ತು 52 ಮಂದಿ ಮಹಿಳೆಯರಾಗಿದ್ದಾರೆ ಎಂದು ಬೃಹನ್‌ ಮುಂಬಯಿ ಮಹಾನಗರ ಪಾಲಿಕೆ ಹೇಳಿದೆ. 7 ಮಂದಿಗೆ ಮಧ್ಯಮ ಪ್ರಮಾಣದ ಲಕ್ಷಣ, 39 ಮಂದಿಗೆ ಅಲ್ಪ ಪ್ರಮಾಣದ ಲಕ್ಷಣ ಇದೆ ಎಂದೂ ಪರೀಕ್ಷೆಯಲ್ಲಿ ಖಚಿತವಾಗಿದೆ. ಮುಂಬಯಿಯಲ್ಲಿ ಶುಕ್ರವಾರ ಒಂದೇ ದಿನ 8,067 ಹೊಸ ಸೋಂಕು ದೃಢಪಟ್ಟಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಶೇ.50 ಹೆಚ್ಚಾಗಿದೆ. ಇದರ ಜತೆಗೆ ಜ.15ರ ವರೆಗೆ ಸಂಜೆ 5 ಗಂಟೆಯಿಂದ ಬೆಳಗ್ಗೆ 5ರ ವರೆಗೆ ಪಾರ್ಕ್‌, ಸಮುದ್ರ ಕಿನಾರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಹೊಸದಿಲ್ಲಿಯಲ್ಲಿನ ಶೇ.50 ಮಂದಿಯಲ್ಲಿ ರೂಪಾಂತರಿ ಕೇಸು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಹೊಸ ಪ್ರಕರಣ ಸಾಮುದಾಯಿಕವಾಗಿ ಹರಡುತ್ತಿದೆ ಎಂದು ಗುರುವಾರ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್‌ ಜೈನ್‌ ಹೇಳಿದ್ದರು. ಡಿ.12ರಿಂದ ಬಳಿಕ ಹೊಸದಿಲ್ಲಿಯಲ್ಲಿ ನಡೆಸಲಾಗಿರುವ ಕೊರೊನಾ ಸೋಂಕಿನ ಪರೀಕ್ಷೆಗಳ ಪೈಕಿ ಶೇ.50ನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸ ಲಾಗಿತ್ತು. ಡಿಸೆಂಬರ್‌ನಲ್ಲಿಯೇ ದಿಲ್ಲಿಯಲ್ಲಿ 9 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ.

ಪರೀಕ್ಷೆಗೆ ಸೂಚನೆ: ಜ್ವರ, ಕೆಮ್ಮು, ಗಂಟಲು ಕೆರತ, ತಲೆನೋವು, ಉಸಿರಾಟದ ತೊಂದರೆ, ಮೈ-ಕೈ ನೋವು, ಆಯಾಸ, ರುಚಿ ಅಥವಾ ವಾಸನೆ ಗ್ರಹಿಕೆ ಇಲ್ಲದಿರು ವುದು ಮತ್ತು ಅತಿಸಾರದಿಂದ ಬಳಲುವವರನ್ನು ಕೊರೊನಾ ಶಂಕಿತರೆಂದು ಪರಿಗಣಿಸಬೇಕು. ಅವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಬೇಕು ಎಂದು ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ರೋಗಲಕ್ಷಣವಿರುವವರು ತಮ್ಮನ್ನು ತಾವು ಪ್ರತ್ಯೇಕ ವಾಗಿಸಿಕೊಳ್ಳಬೇಕು, ಅನಂತರ ಕೊರೊನಾ ಪರೀಕ್ಷೆಗೆ ಒಳಗಾಗಬೇಕು. ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಹೆಚ್ಚು ಬೇಡಿಕೆಯಿರುವ ಹಿನ್ನೆಲೆಯಲ್ಲಿ ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯನ್ನೂ ಹೆಚ್ಚಿಸಬೇಕು. ಹಾಗೆಯೇ ಸರ ಕಾರದಿಂದ ಅನುಮೋದನೆ ಪಡೆದಿರುವ ಕೊರೊನಾ ಪರೀಕ್ಷಾ ಕಿಟ್‌ ಬಳಸಿ ಜನರು ತಮ್ಮ ಮನೆಯಲ್ಲೇ ಕೊರೊನಾ ಪರೀಕ್ಷೆ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಸರಕಾರ ರಾಜ್ಯಗಳಿಗೆ ತಿಳಿಸಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಯುವತಿಯ ಗ್ಯಾಂಗ್ ರೇಪ್ : ಅಪ್ರಾಪ್ತ ವಯಸ್ಕನೂ ಭಾಗಿ

Advertisement

ಇಸ್ರೇಲ್‌ನಲ್ಲಿ ಮೊದಲ “ಫ್ಲೊರೋನಾ’ ಕೇಸು: ಇಸ್ರೇಲ್‌ನಲ್ಲಿ “ಫ್ಲೊರೋನಾ’ದ ಮೊದಲ ಪ್ರಕರಣ ದೃಢಪಟ್ಟಿದೆ. ಎರಡು ಬಾರಿ ಕೊರೊನಾ ಮತ್ತು ಜ್ವರ ಸೇರಿಕೊಂಡು ಬರುವ ಆರೋಗ್ಯ ಸಮಸ್ಯೆಗೆ ಈ ಹೆಸರು ಇರಿಸಲಾಗಿದೆ. ಈ ನಡುವೆ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ನಾಲ್ಕನೇ ಡೋಸ್‌ ಲಸಿಕೆ ನೀಡಲು ಅಲ್ಲಿನ ಸರಕಾರ ಆದೇಶಿಸಿದೆ.

ಇದೇ ವೇಳೆ, ದೇಶದಲ್ಲಿ ಡೆಲ್ಟಾ ರೂಪಾಂತರಿಯನ್ನು ಹಿಂದಿಕ್ಕಿ ಒಮಿಕ್ರಾನ್‌ ಪ್ರವರ್ಧಮಾನಕ್ಕೆ ಬರುತ್ತಿದೆ. ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 16,156 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ರಾತ್ರಿ ಕರ್ಫ್ಯೂನಿಂದ ಫ‌ಲವಿಲ್ಲ: ಡಬ್ಲ್ಯುಎಚ್‌ಒ
ದೇಶದ ಕೆಲವು ರಾಜ್ಯಗಳಲ್ಲಿ ಜಾರಿ ಮಾಡಿರುವ ರಾತ್ರಿ ಕರ್ಫ್ಯೂನಿಂದ ಒಮಿಕ್ರಾನ್‌ ನಿಯಂತ್ರಣ ಸಾಧ್ಯವಿಲ್ಲ. ಅದನ್ನು ಯಾವುದೇ ವೈಜ್ಞಾನಿಕವಾಗಿ ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ಡಬ್ಲ್ಯುಎಚ್‌ಒದ ಮುಖ್ಯ ವಿಜ್ಞಾನಿ ಡಾ| ಸೌಮ್ಯಾ ಸ್ವಾಮಿನಾಥನ್‌ ತಿಳಿಸಿದ್ದಾರೆ. ಸಂದರ್ಶನವೊಂದ ರಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಆಧಾರಿತವಾಗಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಜನರು ಭೀತರಾಗದೆ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಜಗತ್ತಿನಾದ್ಯಂತ ಸೋಂಕಿನ ಕಾರಣದಿಂದಾಗಿ ಮತ್ತೆ ಆಸ್ಪತ್ರೆಗೆ ದಾಖ ಲಾಗುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next