ಗುಜರಾತ್ : ರಾಜ್ಯದಲ್ಲಿ ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಗುಜರಾತ್ ನ ಎಂಟು ನಗರಗಳಲ್ಲಿ ಡಿಸೆಂಬರ್ ೩೧ ರವರೆಗೆ ರಾತ್ರಿ ಕರ್ಫ್ಯೂ ಮುಂದುವರೆಸಲಾಗುದು ಎಂದು ಗುಜರಾತ್ ಸರಕಾರ ಆದೇಶ ಹೊರಡಿಸಿದೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಮಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುವ ನಿಟ್ಟಿನಲ್ಲಿ ಸರಕಾರ ಇಂದಿನಿಂದ (ಡಿಸೆಂಬರ್ ೨೦) ರಿಂದ ಡಿ.೩೧ ರವರೆಗೆ ನೈಟ್ ಕರ್ಫ್ಯೂ ಮುಂದುವರೆಸಲು ಸರಕಾರ ನಿರ್ಧರಿಸಿದೆ.
ಅಹಮದಾಬಾದ್, ಗಾಂಧಿನಗರ, ಸೂರತ್, ರಾಜ್‌ಕೋಟ್, ವಡೋದರಾ, ಭಾವನಗರ, ಜಾಮ್‌ನಗರ್ ಮತ್ತು ಜುನಗರದಲ್ಲಿ ರಾತ್ರಿ ಕರ್ಫ್ಯೂ ಡಿಸೆಂಬರ್ 31 ರವರೆಗೆ ಬೆಳಿಗ್ಗೆ 1 ರಿಂದ 5 ರವರೆಗೆ ಮುಂದುವರಿಯುತ್ತದೆ.
ಈ ನಗರಗಳಲ್ಲಿನ ರೆಸ್ಟೋರೆಂಟ್‌ಗಳು ಮಧ್ಯರಾತ್ರಿಯವರೆಗೆ 75% ಕುಳಿತುಕೊಳ್ಳುವ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಮತ್ತು ಸಿನಿಮಾ ಹಾಲ್‌ಗಳು 100% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ : ಖಾನಾಪುರ ಶಿಕ್ಷಣ ಇಲಾಖೆಯಲ್ಲಿ ಮರಾಠಿಗೆ ಅಗ್ರಸ್ಥಾನ!
ರಾಜ್ಯದಲ್ಲಿ ಸೋಮವಾರದಂದು ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಎಂಟು ಸೋಂಕಿನ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಅವಧಿ ವಿಸ್ತರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.