Advertisement
ದಿಲ್ಲಿ ವಿಪತ್ತು ನಿರ್ವಹಣ ಪ್ರಾಧಿಕಾರ (ಡಿಡಿಎಂಎ) ಬುಧವಾರ ಆದೇಶ ಹೊರಡಿಸಿ, ಕ್ರಿಸ್ಮಸ್, ಹೊಸವರ್ಷದ ಸಂಭ್ರಮಾಚರಣೆಗಳು ಹೊಸ ರೂಪಾಂತರಿಯ ಸೂಪರ್ ಸ್ಪ್ರೆಡ್ ಆಗುವ ಸ್ಥಳಗಳು ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಾಲಿ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಿದೆ.
Related Articles
Advertisement
ಅಖಿಲೇಶ್ ಪತ್ನಿಗೆ ಸೋಂಕು: ಉ.ಪ್ರ. ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸ್ವಯಂ ಕ್ವಾರಂಟೈನ್ ಆಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ಅಲೀಗಢದಲ್ಲಿ ಗುರುವಾರ ರ್‍ಯಾಲಿ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಲಸಿಕೆ ಸರ್ಟಿಫಿಕೆಟ್ ಇಲ್ಲದಿದ್ದರೆ ಸಂಬಳ ಇಲ್ಲ“ಎರಡು ಡೋಸ್ ಲಸಿಕೆ ಹಾಕಿದರೆ ಮಾತ್ರ ಸಂಬಳ’ ಹೀಗೆಂದು ಪಂಜಾಬ್ ಸರಕಾರ ತನ್ನ ಉದ್ಯೋಗಿಗಳಿಗೆ ಖಡಕ್ ಆದೇಶ ನೀಡಿದೆ. ಒಂದು ಡೋಸ್ ಅಥವಾ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಇರುವ ಪ್ರಮಾಣ ಪತ್ರವನ್ನು ರಾಜ್ಯ ಸರಕಾರದ ಉದ್ಯೋಗಕ್ಕೆ ಸಂಬಂ ಧಿಸಿದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಹೀಗಾದರೆ ಮಾತ್ರ ಸರಕಾರಿ ಉದ್ಯೋಗಿಗಳಿಗೆ ಸಂಬಳ ಪಾವತಿಯಾ ಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಇಸ್ರೇಲ್‌ನಲ್ಲಿ 4ನೇ ಡೋಸ್ ಲಸಿಕೆಗೆ ಆದೇಶ
ಅರವತ್ತು ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊರೊನಾ ಲಸಿಕೆಯ ನಾಲ್ಕನೇ ಡೋಸ್ ನೀಡಲು ಇಸ್ರೇಲ್ ನಿರ್ಧರಿಸಿದೆ. ಹೆಚ್ಚಾಗುತ್ತಿರುವ ಒಮಿಕ್ರಾನ್ ರೂಪಾಂತರಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ನಾಲ್ಕನೇ ಡೋಸ್ ನೀಡಲು ನಿರ್ಧರಿಸಿದ ಜಗತ್ತಿನ ಮೊದಲ ರಾಷ್ಟ್ರವೂ ಇಸ್ರೇಲ್ ಆಗಿದೆ. ಇಸ್ರೇಲ್‌ನಲ್ಲಿ 340ಕ್ಕೂ ಹೆಚ್ಚು ಕೇಸ್‌ಗಳು ದೃಢಪಟ್ಟಿವೆ. ಇದರ ಜತೆಗೆ 60 ವರ್ಷದ ವ್ಯಕ್ತಿ ಬೀರ್ಶೆಬಾ ಎಂಬ ನಗರದಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿರುವಂತೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಅದಕ್ಕೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.