Advertisement

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

09:06 AM Dec 05, 2021 | Team Udayavani |

ಮುಂಬೈ: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ದುಬೈ ಮೂಲಕ ಹಿಂದಿರುಗಿದ ಡೊಂಬಿವಿಲಿ ನಿವಾಸಿಯಲ್ಲಿ ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ.

Advertisement

ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ದುಬೈ ಮತ್ತು ದೆಹಲಿ ಮೂಲಕ ಮುಂಬೈಗೆ ಆಗಮಿಸಿದ 33 ವರ್ಷದ ಪ್ರಯಾಣಿಕರ ಪ್ರಯೋಗಾಲಯದ ವರದಿಯು ಒಮಿಕ್ರಾನ್ ರೂಪಾಂತರಿಯ ಇರುವಿಕೆಯನ್ನು ದೃಢಪಡಿಸಿದೆ.

ಇದನ್ನೂ ಓದಿ:ಹೊಸ ವೈರಸ್‌ ಪತ್ತೆ ಹಿನ್ನೆಲೆ: ಸರಕಾರ ಏನೂ ಮಾಡುತ್ತಿಲ್ಲ ಎನ್ನಲಾಗದು

ಸೋಂಕಿತರಿಗೆ ನವೆಂಬರ್ 24 ರಂದು ಸ್ವಲ್ಪ ಜ್ವರ ಕಾಣಿಸಿಕೊಂಡಿತು. ಆದಾಗ್ಯೂ, ಇತರ ಯಾವುದೇ ರೋಗಲಕ್ಷಣಗಳನ್ನು ಗಮನಿಸಲಾಗಿಲ್ಲ. ಸೋಂಕಿತರಿಗೆ ಕಲ್ಯಾಣ್-ಡೊಂಬಿವಿಲಿಯ ಕೋವಿಡ್ ಕೇರ್ ಸೆಂಟರ್‌ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಪತ್ತೆಯಾದ ಒಮಿಕ್ರಾನ್ ರೂಪಾಂತರಿಯ ಮೊದಲ ಪ್ರಕರಣ ಇದಾಗಿದೆ. ದೇಶದ ನಾಲ್ಕನೇ ಪ್ರಕರಣದ ಇದಾಗಿದೆ. ದೇಶದ ಮೊದಲೆರಡು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next