Advertisement

Olympics ಅರ್ಹತಾ ವನಿತಾ ಹಾಕಿ:ಭಾರತ ತಂಡಕ್ಕೆ ಸವಿತಾ ಸಾರಥ್ಯ

11:29 PM Dec 30, 2023 | Team Udayavani |

ಬೆಂಗಳೂರು: ಹಿರಿಯ ಗೋಲ್‌ಕೀಪರ್‌ ಸವಿತಾ ಪೂನಿಯ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡ ವನ್ನು ಮುನ್ನಡೆಸಲಿದ್ದಾರೆ. ವಂದನಾ ಕಟಾರಿಯಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಒಟ್ಟು 18 ಆಟಗಾರ್ತಿಯರಿದ್ದಾರೆ.

Advertisement

ಪಂದ್ಯಾವಳಿ ಜ. 13ರಿಂದ 19ರ ತನಕ ರಾಂಚಿಯಲ್ಲಿ ನಡೆಯಲಿದೆ. ಭಾರತ “ಬಿ’ ವಿಭಾಗದಲ್ಲಿ ಸ್ಥಾನ ಪಡೆ ದಿದೆ. ಇಲ್ಲಿನ ಇತರ ತಂಡಗಳೆಂದರೆ ನ್ಯೂಜಿ ಲ್ಯಾಂಡ್‌, ಇಟಲಿ, ಯುಎಸ್‌ಎ. “ಎ’ ವಿಭಾಗದಲ್ಲಿ ಜರ್ಮನಿ, ಜಪಾನ್‌, ಚಿಲಿ ಮತ್ತು ಜೆಕ್‌ ಗಣರಾಜ್ಯ ತಂಡಗಳಿವೆ.

ಭಾರತ ತನ್ನ ಮೊದಲ ಪಂದ್ಯವನ್ನು ಯುಎಸ್‌ಎ ವಿರುದ್ಧ ಆಡಲಿದೆ (ಜ. 13). ಬಳಿಕ ನ್ಯೂಜಿಲ್ಯಾಂಡ್‌ (ಜ. 14) ಮತ್ತು ಇಟಲಿ ವಿರುದ್ಧ (ಜ. 16) ಸೆಣಸಲಿದೆ.

ಸವಿತಾ ಪೂನಿಯ ಇತ್ತೀಚೆಗಷ್ಟೇ ಸತತ 3ನೇ ಬಾರಿಗೆ ಎಫ್ಐಎಚ್‌ ವರ್ಷದ ಗೋಲ್‌ಕೀಪರ್‌ ಪ್ರಶಸ್ತಿಗೆ ಭಾಜನರಾಗಿದ್ದರು. ಹಿರಿಯ ಫಾರ್ವರ್ಡ್‌ ಆಟಗಾರ್ತಿ ವಂದನಾ ಕಟಾರಿಯಾ ಭಾರತ ಪರ 300 ಅಂತಾರಾಷ್ಟ್ರೀಯ ಪಂದ್ಯವಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತ ತಂಡ
ಗೋಲ್‌ಕೀಪರ್ : ಸವಿತಾ ಪೂನಿಯ (ನಾಯಕಿ), ಬಿಚುದೇವಿ ಕೆ.
ಡಿಫೆಂಡರ್: ನಿಕ್ಕಿ ಪ್ರಧಾನ್‌, ಉದಿತಾ, ಇಶಿಕಾ ಚಕ್ರವರ್ತಿ, ಮೋನಿಕಾ.
ಮಿಡ್‌ಫೀಲ್ಡರ್: ನಿಶಾ, ವೈಷ್ಣವಿ ವಿಟ್ಠಲ ಫಾಲ್ಕೆ, ನೇಹಾ, ನವನೀತ್‌ ಕೌರ್‌, ಸಲೀಮಾ ಟೇಟೆ, ಸೋನಿಕಾ, ಜ್ಯೋತಿ, ಬ್ಯೂಟಿ ಡುಂಗ್‌ಡುಂಗ್‌.
ಫಾರ್ವರ್ಡ್ಸ್‌: ಲಾಲ್ರೆಮಿÕಯಾಮಿ, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next