Advertisement

Droupadi Murmu: ಭಾರತದಲ್ಲಿ ಒಲಿಂಪಿಕ್ಸ್‌ ನಡೆಯಬೇಕು: ಮುರ್ಮು

11:04 PM Aug 28, 2024 | Team Udayavani |

ಹೊಸದಿಲ್ಲಿ: 2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್ಡಿಂಗ್‌ ಸಲ್ಲಿಸಲು ಭಾರತ ಆಸಕ್ತಿ ತೋರಿರುವುದು, ದೇಶದ ಜನರನ್ನು ಸ್ಫೂರ್ತಿಗೊಳಿಸುವ ನಿಟ್ಟಿನಲ್ಲಿ ಮತ್ತು ದೇಶದಲ್ಲಿ ಕ್ರೀಡೆಯನ್ನು ಇನ್ನಷ್ಟು ಪ್ರಚುರಪಡಿಸುವ ನೆಲೆಯಲ್ಲಿ ಉತ್ತಮ ನಿರ್ಧಾರವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

Advertisement

ಇದರ ಜತೆಗೆ, ಭಾರತದಲ್ಲಿ ಖಂಡಿತ ಒಂದು ದಿನ ಒಲಿಂಪಿಕ್ಸ್‌ ನಡೆಯಬೇಕು ಎಂದು ಅವರು ಆಶಯವನ್ನು ವ್ಯಕ್ತಪಡಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಂವಾದಲ್ಲಿ ಮಾತನಾಡಿದ ಮುರ್ಮು, ಭಾರತದಲ್ಲಿ ಖಂಡಿತ ಒಲಿಂಪಿಕ್ಸ್‌ ನಡೆಯಬೇಕು. ಆಗ ದೇಶದ ಜನರು ಸ್ಫೂರ್ತಿಗೊಳ್ಳುತ್ತಾರೆ. ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರಚಾರ ಲಭಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next