Advertisement

ವನಿತೆಯರಿಗೆ ಒಲಿಯಲಿ ಮೊದಲ ಹಾಕಿ ಪದಕ

11:07 PM Aug 05, 2021 | Team Udayavani |

ಟೋಕಿಯೊ: ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ ಕಂಚಿನ ಪದಕ ಗೆದ್ದ ಬೆನ್ನಲ್ಲೇ ದೇಶದ ಕ್ರೀಡಾಭಿಮಾನಿಗಳ ಗಮನವೆಲ್ಲ ವನಿತೆಯರತ್ತ ತಿರುಗಿದೆ. ರಾಣಿ ರಾಮ್‌ಪಾಲ್‌ ಪಡೆ ಕೂಡ ಪ್ಲೇ-ಆಫ್ ನಲ್ಲಿ ಸೆಣಸಲಿದ್ದು, ಶುಕ್ರವಾರ ಗ್ರೇಟ್‌ ಬ್ರಿಟನ್‌ ಸವಾಲನ್ನು ಎದುರಿಸಲಿದೆ.

Advertisement

ಕಂಚು ಗೆದ್ದರೆ ಇದು ಭಾರತೀಯ ಹಾಕಿಯ ಮತ್ತೂಂದು ವರ್ಣರಂಜಿತ ಅಧ್ಯಾಯವಾಗಲಿದೆ. ಭಾರತದ ವನಿತೆಯರು ಒಲಿಂಪಿಕ್ಸ್‌ನಲ್ಲಿ ಪದಕ ಖಾತೆ ತೆರೆದಂತಾಗುತ್ತದೆ.

ಭಾರತ ಮತ್ತು ಗ್ರೇಟ್‌ ಬ್ರಿಟನ್‌ ಒಂದೇ ಬಣದ ತಂಡಗಳು. ಲೀಗ್‌ ಹಂತದಲ್ಲಿ ಬ್ರಿಟನ್‌ ವಿರುದ್ಧ ಭಾರತ 1-4 ಅಂತರದ ಸೋಲನುಭವಿಸಿತ್ತು. ಆದರೆ ಕೊನೆಯ ಎರಡು ಪಂದ್ಯಗಳನ್ನು ಗೆದ್ದ ಭಾರತ, ತನ್ನ ನಾಕೌಟ್‌ ಅದೃಷ್ಟಕ್ಕಾಗಿ ಇದೇ ಗ್ರೇಟ್‌ ಬ್ರಿಟನ್‌ನತ್ತ ಮುಖ ಮಾಡಿತ್ತು. ಅದು ಐರ್ಲೆಂಡ್‌ಗೆ ಸೋಲುಣಿಸಿದ ಕಾರಣ ಭಾರತಕ್ಕೆ ನಾಕೌಟ್‌ ಕದ ತೆರೆಯಲ್ಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next