Advertisement

Olympics: ರಷ್ಯಾ ಶೂಟರ್ ಗೈರಿನಿಂದ ಭಾರತಕ್ಕೆ ಲಾಭ?

11:34 PM Jul 22, 2024 | Team Udayavani |

ಹೊಸದಿಲ್ಲಿ: ಶೂಟಿಂಗ್‌ನಲ್ಲಿ ಭಾರತಕ್ಕೆ ಪ್ರಬಲ ಪೈಪೋಟಿ ನೀಡುತ್ತಿದ್ದ ರಷ್ಯಾ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಭಾರತೀಯ ಶೂಟರ್‌ಗಳು ಇದರ ಅನುಕೂಲ ಪಡೆಯುವ ಸಾಧ್ಯತೆಯಿದ್ದು, ಭಾರತದ ಪದಕ ನಿರೀಕ್ಷೆ ಹೆಚ್ಚಾಗಿದೆ.

Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರಷ್ಯಾ ಶೂಟಿಂಗ್‌ ಸ್ಪರ್ಧೆಯಲ್ಲಿ 8 ಪದಕ ಗೆಲ್ಲುವ ಮೂಲಕ 3ನೇ ಸ್ಥಾನದಲ್ಲಿತ್ತು. ಹೀಗಾಗಿ ಭಾರತದ ಶೂಟರ್‌ಗಳು ಪದಕ ಪಟ್ಟಿಯಲ್ಲಿ ಅಗ್ರ 3ಕ್ಕೇರಲು ಕಷ್ಟ ಪಟ್ಟಿದ್ದರು. ಈಗ ರಷ್ಯಾ ಭಾಗಿಯಾಗದಿರುವ ಕಾರಣ ಭಾರತದ ಶೂಟರ್‌ಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಡೋಪಿಂಗ್‌ ಪ್ರಕರಣ ಮತ್ತು ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿರುವ ಕಾರಣ ಒಲಿಂಪಿಕ್ಸ್‌ನಿಂದ ರಷ್ಯಾವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ರಷ್ಯಾದ 16 ಕ್ರೀಡಾಪಟುಗಳು ತಟಸ್ಥ ಕ್ರೀಡಾಪಟುಗಳಾಗಿ ಕೇವಲ 6 ಕ್ರೀಡೆಗಳಲ್ಲಷ್ಟೇ ಸ್ಪರ್ಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next