Advertisement
“ಉದಯವಾಣಿ’ ಜತೆ ಮಾತನಾಡಿದ ಅವರು, ಒಲಿಂಪಿಕ್ಸ್ ಬಳಿಕ ಪ್ಯಾರಾ ಆ್ಯತ್ಲೀಟ್‌ಗಳು ದೇಶದ ಕೀರ್ತಿ ಪತಾಕೆ ಹಾರಿಸಲು ಪ್ಯಾರಿಸ್‌ಗೆ ಪ್ರಯಾಣ ಆರಂಭಿಸಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ನೆರವು ಮತ್ತು ತರಬೇತಿ ಸಿಕ್ಕಿದೆ. ಹೀಗಾಗಿ ಭಾರತ ಹಿಂದಿಗಿಂತಲೂ ಹೆಚ್ಚು ಪದಕಗಳನ್ನು ಜಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಆ್ಯತ್ಲೀಟ್‌ಗಳಿಗೆ ಪ್ರೋತ್ಸಾಹ ನೀಡುವ ರೀತಿಯಲ್ಲೇ ಪ್ಯಾರಾ ಆ್ಯತ್ಲೀಟ್‌ಗಳಿಗೂ ಪ್ರೋತ್ಸಾಹ ಮತ್ತು ತರಬೇತಿ ನೀಡಲಾಗಿದೆ. ಈ ಬಾರಿ 40ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಕೇಂದ್ರ ಸರಕಾರ ಕ್ರೀಡಾ ನೀತಿಯನ್ನು ಬದಲಾವಣೆ ಮಾಡಿದ್ದು, ತರಬೇತಿ, ಸಹಕಾರವನ್ನು ಹೆಚ್ಚಳ ಮಾಡಿದೆ. ಅಂಗವಿಕಲರಿಗಾಗಿಯೇ ಗ್ವಾಲಿಯರ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್, ಅಮೃತಬಿಂದು ಎಂಬಂತಹ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು. ರಾಜ್ಯ ಹಣ ಬಿಡುಗಡೆ ಮಾಡಬೇಕು
ಪ್ಯಾರಾಲಿಂಪಿಕ್ಸ್‌ಲ್ಲಿ 84 ಮಂದಿ ಭಾಗಿಯಾಗುತ್ತಿದ್ದರೂ ರಾಜ್ಯದಿಂದ 3 ಜನ ಮಾತ್ರ ಇದ್ದಾರೆ. ಇದಕ್ಕೆ ಕಾರಣ ವಾಗಿ ರುವುದು ಅರ್ಹತಾ ಸುತ್ತುಗಳು ವಿದೇಶಗಳಲ್ಲಿ ನಡೆ ಯುವುದು. ಇದರಿಂದ ಸಮಸ್ಯೆಯಾಗುತ್ತದೆ. ಇದಕ್ಕಾಗಿ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಬೇಕು ಎಂದರು.
Related Articles
ರಾಜ್ಯದಿಂದ ಈ ಬಾರಿ ಮೂವರು ಸ್ಪರ್ಧಿಗಳು ಭಾಗಿಯಾಗುತ್ತಿದ್ದು, ಇದರಲ್ಲಿ ಇಬ್ಬರಿಗೆ ಪದಕ ಖಚಿತ ಎನ್ನಬಹುದು. ಪವರ್ ಲಿಫ್ಟರ್ ಸಕೀತಾ ಖಾತುನ್ ಮತ್ತು ಶೂಟರ್ ಶ್ರೀಹರ್ಷ ದೇವರೆಡ್ಡಿ ಖಂಡಿತ ಪದಕ ಗೆಲ್ಲಲಿದ್ದಾರೆ. ಮೂವರೂ ಪದಕ ಗೆಲ್ಲಲಿ ಎಂದು ವೆಂಕಟೇಶ್ ಹಾರೈಸಿದರು.
Advertisement
ಭಾರತೀಯ ಖಾದ್ಯಕ್ಕೆ ವ್ಯವಸ್ಥೆಪ್ಯಾರಿಸ್ನಲ್ಲಿನ ಹವಾಮಾನ ಮತ್ತು ಆಹಾರ ಕ್ರೀಟಾಪಟುಗಳಿಗೆ ಸವಾಲು ಒಡ್ಡಬಹುದು. ಹೀಗಾಗಿ ಭಾರತೀಯ ಶೈಲಿಯ ಊಟ ಒದಗಿ ಸಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ. ಅಲ್ಲಿನ ವಾತಾವರಣಕ್ಕೆ ಹೊಂದಿ ಕೊಳ್ಳಲು ಬೇಕಾದ ನೆರವನ್ನು ಒದಗಿಸಲಾಗುತ್ತಿದೆ. ಕೆಲದಿನ ಮೊದಲೇ ಅಲ್ಲಿಗೆ ತಲುಪುವ ಕ್ರೀಡಾಳುಗಳಿಗೆ ಈ ಅವಕಾಶವಿದೆ ಎಂದರು. – ಗಣೇಶ್ ಪ್ರಸಾದ್