Advertisement

Olympics; ಜಪಾನ್‌ ಜಿಮ್ನಾಸ್ಟಿಕ್‌ ನಾಯಕಿ ಮಿಯಾಟಾ ವಿರುದ್ಧ ಶಿಸ್ತು ಕ್ರಮ

11:42 PM Jul 19, 2024 | Team Udayavani |

ಜಪಾನ್‌: ಒಲಿಂಪಿಕ್ಸ್‌ನಲ್ಲಿ ಜಪಾನ್‌ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ತಂಡದ ನಾಯಕಿಯಾಗಿದ್ದ 19 ವರ್ಷದ ಶೊಕೊ ಮಿಯಾಟಾ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದ್ದು, ಅವರನ್ನು ತಂಡದಿಂದ ಕೈಬಿಡಲಾಗಿದೆ. ತಂಡದ ನಿಯಮಾವಳಿಯನ್ನು ಉಲ್ಲಂ ಸಿದ ಕಾರಣಕ್ಕಾಗಿ ಈ ಕಠಿನ ಕ್ರಮ ಎಂಬುದಾಗಿ ಜಪಾನ್‌ ಜಿಮ್ನಾಸ್ಟಿಕ್ಸ್‌ ಅಸೋಸಿಯೇಶನ್‌ (ಜೆಜಿಎ) ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಶೊಕೊ ಮಿಯಾಟಾ ತಂಡದ ತರಬೇತಿ ಶಿಬಿರಲ್ಲಿ ಮಧ್ಯಪಾನ ಹಾಗೂ ಧೂಪಮಾನ ಮಾಡಿರುವ ಆರೋಪ ಹೊತ್ತಿದ್ದರು. ಇದು ಸಾಬೀತುಗೊಂಡ ಕೂಡಲೇ ಮೊನಾಕೊ ಶಿಬಿರದಿಂದ ಜಪಾನಿಗೆ ವಾಪಸಾದರು. ಇದಕ್ಕಾಗಿ ನಾವು ತೀವ್ರ ವಿಷಾದ ಸೂಚಿಸುತ್ತೇವೆ ಎಂಬುದಾಗಿ ಜೆಜಿಎ ಅಧ್ಯಕ್ಷ ತದಾಶಿ ಫ‌ುಜಿಟ ಹೇಳಿದ್ದಾರೆ.

“ಸೀನಿಯರ್‌ ಮಟ್ಟದಲ್ಲಿ ಚಿನ್ನದ ಪದಕ ಗೆಲ್ಲಲೇ ಬೇಕೆಂಬ ಒತ್ತಡ ಮಿಯಾಟಾ ಮೇಲೆ ಇದ್ದಂತಿತ್ತು. 1964ರ ತವರಿನ ಒಲಿಂಪಿಕ್ಸ್‌ ಬಳಿಕ ಜಪಾನ್‌ ಆರ್ಟಿಸ್ಟಿಕ್‌ ಜಿಮ್ನಾಸ್ಸಿಕ್ಸ್‌ನಲ್ಲಿ ಚಿನ್ನ ಗೆದ್ದಿಲ್ಲ. ಹೀಗಾಗಿ ಮಾನಸಿಕವಾಗಿ ಕುಗ್ಗಿದ್ದರು’ ಎಂಬುದಾಗಿ ಮಿಯಾಟಾ ಅವರ ಕೋಚ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next