Advertisement
2024ರ ಮೊದಲಾರ್ಧದಲ್ಲೇ ಮನೆಗಳಲ್ಲಿ ಒಬ್ಬಂಟಿಯಾಗಿರುವ 37 ಸಾವಿರ ಮಂದಿ ಮೃತಪಟ್ಟಿದ್ದು, ಈ ಪೈಕಿ ಶೇ.70 ಮಂದಿ 65 ವರ್ಷದ ಮೇಲ್ಪಟ್ಟವರಾಗಿದ್ದಾರೆ ಎಂದು ಜಪಾನ್‌ನ ನ್ಯಾಷನಲ್ ಪೊಲೀಸ್ ಏಜೆನ್ಸಿ ವರದಿ ನೀಡಿದೆ.
Related Articles
Advertisement
ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಜನಸಂಖ್ಯಾ ಹಾಗೂ ಸಾಮಾಜಿಕ ಭದ್ರತಾ ಸಂಶೋಧನಾ ಸಂಸ್ಥೆ ನಡೆಸಿದ್ದ ವರದಿಯ ಪ್ರಕಾರ ದೇಶದಲ್ಲಿ ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರ ಸಂಖ್ಯೆ(65 ವರ್ಷ ಮೇಲ್ಪಟ್ಟು) 2050ರ ವೇಳೆಗೆ 1.8 ಕೋಟಿಯಷ್ಟು ತಲುಪಲಿದೆ. ಅದೇ ವರ್ಷ ದೇಶದಲ್ಲಿ ಒಂಟಿಯಾಗಿ ಬದುಕುವವರ ಒಟ್ಟು ಜನರ ಸಂಖ್ಯೆ 2.33 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಜಪಾನ್‌ನಲ್ಲಿ ಪ್ರತಿ 10 ಮಂದಿಯ ಪೈಕಿ ಒಬ್ಬರು 80 ವರ್ಷದವರಿದ್ದು, ಗ್ರಾಮೀಣ ಭಾಗದಲ್ಲಂತೂ ವೃದ್ಧರ ಸಂಖ್ಯೆ ತೀವ್ರ ಹೆಚ್ಚಳವಾಗಿದೆ. ಮನೆಯ ಕಿರಿಯರು ಕೂಡ ಕೆಲಸಗಳನ್ನು ಅರಸಿ ಪಟ್ಟಣಗಳತ್ತ ಹೊರಟ ಹಿನ್ನೆಲೆಯಲ್ಲಿ ವೃದ್ಧರು ಒಬ್ಬಂಟಿಯಾಗಿದ್ದಾರೆ. ಹಬ್ಬ ಆಚರಣೆಗಳ ಸಿದ್ಧತೆಯನ್ನೂ ವೃದ್ಧರು ಮಾಡಲು ಸಾಧ್ಯವಾಗದ ಕಾರಣಕ್ಕೆ ಇತ್ತೀಚೆಗಷ್ಟೇ (ಫೆ.17) ಸಾವಿರ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಜಪಾನ್ ಸಾಂಪ್ರದಾಯಿಕ ಸೊಮಿನ್‌ಸೈ ಹಬ್ಬವನ್ನೂ ಅಂತ್ಯಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.