Advertisement

Olympics ವಸ್ತ್ರ ವಿನ್ಯಾಸಕಾರ ತರುಣ್‌ಗೆ ಟೀಕೆಗಳ ಸುರಿಮಳೆ

01:05 AM Jul 28, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ವಿನ್ಯಾಸಕಾರ ತರುಣ್‌ ತಹಿಲಿಯಾನಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯಾಗಿದೆ. ಭಾರತದ ಕ್ರೀಡಾಪಟುಗಳು ಧರಿಸಿದ್ದ ಸಮವಸ್ತ್ರಗಳು ಕಳೆಪೆ ಗುಣಮಟ್ಟದ್ದಾಗಿತ್ತು, ದೇಶಕ್ಕೆ ಅವಮಾನ ಮಾಡುವ ರೀತಿಯಲ್ಲಿ ಇತ್ತು ಎಂದು ಅನೇಕ ನೆಟ್ಟಿಗರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

Advertisement

ಪಥಸಂಚಲನಕ್ಕೂ ಮುನ್ನ ಸಿಂಧು, ಶರತ್‌ ಕಮಲ್‌ ಸೇರಿದಂತೆ ಭಾರತೀಯ ಕ್ರೀಡಾಪಟು ಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ವಿನ್ಯಾಸ ಮಾಡಲಾಗಿದ್ದ ಸಮವಸ್ತ್ರ ಧರಿಸಿದ್ದ ಚಿತ್ರಗಳು ವೈರಲ್‌ ಆಗಿದ್ದವು. ಇದರ ಬೆನ್ನಲ್ಲೇ, ಭಾರತೀಯರ ಸಮಸವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next