Advertisement

ಒಲಿಂಪಿಕ್ಸ್‌  ಬಾಕ್ಸಿಂಗ್‌: ಭಾರತೀಯರ ತೂಕ ವಿಭಾಗ ಬದಲು

12:30 AM Mar 09, 2019 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ ಮುಂದಿನ ವರ್ಷದ ಒಲಿಂಪಿಕ್ಸ್‌ ನಲ್ಲಿ ಯಾವ್ಯಾವ ತೂಕ ವಿಭಾಗದಲ್ಲಿ ಸ್ಪರ್ಧೆಗಳು ಇರಲಿವೆ ಎನ್ನುವುದನ್ನು ಅಂತಿಮಗೊಳಿಸಿದೆ. ಪರಿಣಾಮ ಭಾರತದ ಖ್ಯಾತ ಬಾಕ್ಸರ್‌ಗಳಾದ ಅಮಿತ್‌ ಪಂಗಲ್‌, ಶಿವ ಥಾಪ, ಮನೀಷ್‌ ಕೌಶಿಕ್‌ ಈಗಿರುವ ತೂಕ ವಿಭಾಗಗಳನ್ನು ಬಿಟ್ಟು ಬೇರೆ ವಿಭಾಗಕ್ಕೆ ನೆಗೆಯಬೇಕಾಗಿದೆ.

Advertisement

ಪಂಗಲ್‌  52 ಕೆಜಿ ವಿಭಾಗ
49 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಅಮಿತ್‌ ಪಂಗಲ್‌ ಇನ್ನು 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಶಿವ ಥಾಪ, ಮನೀಶ್‌ ಕೌಶಿಕ್‌ 63 ಕೆಜಿ ವಿಭಾಗಕ್ಕೆ ಬದಲಾಯಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮೊದಲೇ ಸುಳಿವು ಲಭಿಸಿದ್ದರಿಂದ ಬದಲಾವಣೆಗೆ ಬಾಕ್ಸರ್‌ಗಳು ಸಿದ್ಧವಿದ್ದಾರೆ ಎಂದು “ಬಾಕ್ಸಿಂಗ್‌ ಇಂಡಿಯಾ’ ತಿಳಿಸಿದೆ. 

ಅಂತಿಮಗೊಂಡ ತೂಕ ವಿಭಾಗ
ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ ಪುರುಷರ ವಿಭಾಗದಲ್ಲಿ 52 ಕೆಜಿ, 57 ಕೆಜಿ, 63 ಕೆಜಿ, 69 ಕೆಜಿ, 75 ಕೆಜಿ, 81 ಕೆಜಿ, 91 ಕೆಜಿ, +91 ಕೆಜಿಯನ್ನು ಅಂತಿಮಗೊಳಿಸಿದೆ. ಮಹಿಳೆಯರ ವಿಭಾಗದಲ್ಲಿ 51 ಕೆಜಿ, 57 ಕೆಜಿ, 64 ಕೆಜಿ, 69 ಕೆಜಿ, 75 ಕೆಜಿಯನ್ನು ಅಂತಿಮಗೊಳಿಸಲಿದೆ. ಅಂದರೆ ಮುಂದಿನ ವರ್ಷದ ಒಲಿಂಪಿಕ್ಸ್‌ನಲ್ಲಿ ಈ ವಿಭಾಗದಲ್ಲಿ ಮಾತ್ರ ಸ್ಪರ್ಧೆಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next