Advertisement

ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದ ದ್ಯುತಿ, ಅನ್ನು ರಾಣಿ, ಜಬೀರ್‌

12:10 AM Jul 01, 2021 | Team Udayavani |

ಹೊಸದಿಲ್ಲಿ: ವಿಶ್ವ ರ್‍ಯಾಂಕಿಂಗ್‌ ಕೋಟಾದ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಸ್ಟಾರ್‌ ಓಟಗಾರ್ತಿ ದ್ಯುತಿ ಚಂದ್‌(100 ಮೀ. ಹಾಗೂ 200 ಮೀ. ಓಟ), ಅನ್ನು ರಾಣಿ (ಜಾವಲಿನ್‌), ಎಂ.ಪಿ. ಜಬೀರ್‌ (400 ಮೀ. ಹರ್ಡಲ್ಸ್‌) ನಲ್ಲಿ ಅರ್ಹತೆ ಪಡೆದಿದ್ದಾರೆ.

Advertisement

ವಿಶ್ವ ರ್‍ಯಾಂಕಿಂಗ್‌ ಮೂಲಕ 100 ಮೀಟರ್‌ನಲ್ಲಿ 22 ಸ್ಥಾನಗಳು ಹಾಗೂ 200 ಮೀಟರ್‌ನಲ್ಲಿ 15 ಸ್ಥಾನಗಳು ಮೀಸಲಿದ್ದವು. ದ್ಯುತಿ ಚಂದ್‌ 100 ಮೀ.ನಲ್ಲಿ 44ನೇ ಸ್ಥಾನದಲ್ಲಿದ್ದರೆ, 200 ಮೀ. ಓಟದಲ್ಲಿ 51ನೇ ಸ್ಥಾನದಲ್ಲಿದ್ದಾರೆ.

ದ್ಯುತಿ ನೇರ ಒಲಿಂಪಿಕ್ಸ್‌ ಅರ್ಹತಾ ಸ್ಥಾನವನ್ನು ಪಡೆದು ಕೊಳ್ಳಲು ವಿಫ‌ಲರಾಗಿದ್ದರು. ಪಟಿಯಾಲದಲ್ಲಿ ನಡೆಯುತ್ತಿ ರುವ ಅಂತರ್‌ ರಾಜ್ಯ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 100 ಮೀ. ಫೈನಲ್‌ನಲ್ಲಿ 0.02 ಸೆಕೆಂಡ್‌ಗಳಿಂದ ಒಲಿಂಪಿಕ್ಸ್‌ ಅರ್ಹತಾ ಸಮಯ ತಲುಪಲು ವಿಫ‌ಲರಾಗಿದ್ದರು.

ಇದನ್ನೂ ಓದಿ :ನೆಟ್‌ವರ್ಕ್‌ ಸಮಸ್ಯೆ: ಪ್ರತಿಭಟನೆಗೆ ಶಾಸಕ ಹಾಲಪ್ಪ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next