Advertisement

ಜಪಾನಿನ 13 ರ ಬಾಲೆಗೆ ಬಂಗಾರ

09:59 PM Jul 26, 2021 | Team Udayavani |

ಟೋಕಿಯೊ: ಜಪಾನ್‌ನ ನಿಶಿಯಾ ಮೊಮಿಜಿ ತವರಿನ ಒಲಿಂಪಿಕ್ಸ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಕಿರಿಯ ಸಾಧಕಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Advertisement

ಇದೇ ಮೊದಲ ಬಾರಿಗೆ ಅಳವಡಿಸಲಾದ ಸ್ಕೇಟ್‌ ಬೋರ್ಡಿಂಗ್‌ ಸ್ಪರ್ಧೆಯಲ್ಲಿ ನಿಶಿಯಾ ಚಿನ್ನ ಗೆದ್ದರು. ಈಕೆಯ ವಯಸ್ಸು ಕೇವಲ 13 ವರ್ಷ, 330 ದಿನ! 1936ರ ಬರ್ಲಿನ್‌ ಕ್ರೀಡಾಕೂಟದಲ್ಲಿ ಅಮೆರಿಕದ ಮಾರ್ಜೋರಿ ಗೆಸ್ಟ್ರಿಂಗ್‌ 13 ವರ್ಷ, 168 ದಿನಗಳ ವಯಸ್ಸಿನಲ್ಲಿ ಒಲಿಂಪಿಕ್ಸ್‌ ಸ್ವರ್ಣ ಜಯಿಸಿದ್ದು ದಾಖಲೆಯಾಗಿದೆ.

85 ವರ್ಷಗಳ ಈ ದಾಖಲೆ ಇಂದಿಗೂ ಅಜೇಯವಾಗಿ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next