ಜೋ ಮೋರೊ ಮೆಲ್ಬರ್ನ್ ಒಲಿಂಪಿಕ್ ಸಾಧನೆಯ ವೇಳೆ ವಿವಿ ವಿದ್ಯಾರ್ಥಿಯಾಗಿದ್ದರು. ಅಂದು 100 ಮೀ., 200 ಮೀ. ಓಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೋರೊ, 400 ಮೀ. ರಿಲೇಯಲ್ಲಿ ಸ್ವರ್ಣ ಜಯಿಸಿದ ಅಮೆರಿಕದ ತಂಡದ ಸದಸ್ಯನೂ ಆಗಿದ್ದರು.
200 ಮೀ. ಓಟದಲ್ಲಿ ಅವರು 20.6 ಸೆಕೆಂಡ್ಗಳ ವಿಶ್ವದಾಖಲೆಯನ್ನು ಸರಿದೂಗಿಸಿದರೆ, ರಿಲೇಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
1989ರಲ್ಲಿ ಪ್ರತಿಷ್ಠಿತ ನ್ಯಾಶನಲ್ ಟ್ರಕ್ ಆ್ಯಂಡ್ ಫೀಲ್ಡ್ ಹಾಲ್ ಆಫ್ ಫೇಮ್ ಗೌರವಕ್ಕೆ ಮೋರೊ ಭಾಜನರಾಗಿದ್ದರು.
Advertisement