ಲಂಡನ್: ನೀಳಕಾಯದ ಈ ಆಂಗ್ಲ ಬೌಲರ್ ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಪರಿಣಾಮಕಾರಿಯಾಗಿದ್ದ. ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಪದಾರ್ಪಣೆ ಮಾಡಿದ್ದ ಸಂತಸದಲ್ಲಿದ್ದ ಸಸೆಕ್ಸ್ ವೇಗಿ ಒಲಿ ರಾಬಿನ್ಸನ್ ಖುಷಿ ಈಗ ಮರೆಯಾಗಿದೆ. ಕಾರಣ ಸುಮಾರು ಒಂಬತ್ತು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ರಾಬಿನ್ಸನ್ ವೃತ್ತಿ ಜೀವನಕ್ಕೆ ಮುಳುವಾಗಿದೆ.
2013 ಮತ್ತು 2013ರಲ್ಲಿ ರಾಬಿನ್ಸನ್ ಮಾಡಿದ್ದ ಜನಾಂಗೀಯ ನಿಂದನಾತ್ಮಕ ಟ್ವೀಟ್ ಕಾರಣದಿಂದ ಅವರ ವಿರುದ್ಧ ಶಿಸ್ತಕ್ರಮ ಕೈಗೊಂಡಿದ್ದು, ರಾಬಿನ್ಸನ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗಿದೆ ಎಂದು ಇಸಿಬಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಶ್ರೇಷ್ಠ ಮಟ್ಟದಲ್ಲಿದೆ: ಕಿವೀಸ್ ನಾಯಕ ವಿಲಿಯಮ್ಸನ್
ಜೂನ್ 10ರಂದು ಆರಂಭವಾಗುವ ಕಿವೀಸ್ ವಿರುದ್ದದ ಎರಡನೇ ಪಂದ್ಯಕ್ಕೂ ರಾಬಿನ್ಸನ್ ರನ್ನು ಆಯ್ಕೆ ಮಾಡುವಂತಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ರಾಬಿನ್ಸನ್ ತಂಡವನ್ನು ತೊರೆಯಬೇಕು ಎಂದು ಇಸಿಬಿ ತಿಳಿಸಿದೆ.
ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರಾಬಿನ್ಸನ್ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಮಿಂಚಿದ್ದ ರಾಬಿನ್ಸನ್ ಏಳು ವಿಕೆಟ್ ಪಡೆದಿದ್ದರು. ಆದರೆ ಮೊದಲ ಪಂದ್ಯಕ್ಕೆ ಕ್ರಿಕೆಟ್ ಜೀವನ ಅಂತ್ಯವಾಗಿದೆ.
27 ವರ್ಷದ ಒಲಿ ರಾಬಿನ್ಸನ್ 2012 ಮತ್ತು 2013ರಲ್ಲಿ ರೇಸಿಸ್ಟ್ ಮತ್ತು ಸೆಕ್ಸಿಸ್ಟ್ ಟ್ವಿಟ್ ಗಳನ್ನು ಮಾಡಿದ್ದರು. ಅದು ಕೆಲ ದಿನಗಳ ಹಿಂದೆ ಚರ್ಚೆಗೆ ಕಾರಣವಾಗಿತ್ತು. ಬಳಿಕ ಇಸಿಬಿ ಇದರ ಬಗ್ಗೆ ತನಿಖೆ ನಡೆಸಿತ್ತು.