Advertisement

ಹಳೆಯಂಗಡಿ: ಹೆದ್ದಾರಿಯಲ್ಲಿಯೇ ತ್ಯಾಜ್ಯ ನೀರು

01:15 PM Dec 21, 2017 | |

ಹಳೆಯಂಗಡಿ: ಇಲ್ಲಿನ ರಾ. ಹೆದ್ದಾರಿಯಲ್ಲಿಯೇ ಚರಂಡಿಯ ಮೂಲಕ ತ್ಯಾಜ್ಯ ನೀರು ಹರಿದು ಪರಿಸರದಲ್ಲಿ ದುರ್ವಾಸನೆ ಉಂಟಾಗಿದ್ದು, ಸ್ಥಳೀಯ ನಿವಾಸಿಗಳು ಹಳೆಯಂಗಡಿ ಗ್ರಾ.ಪಂ.ಗೆ ದೂರು ನೀಡಿ ಸಂಬಂ ಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Advertisement

ಮೂರು ದಿನಗಳಿಂದ ಹಳೆಯಂಗಡಿ ಹೆದ್ದಾರಿ ಬಳಿಯ ನೇಕಾರ ಮಹಲ್‌ನ ಮುಂಭಾಗದಿಂದ ಖಾಸಗಿ ನರ್ಸರಿಯೊಂದರ ಮುಂಭಾಗದವರೆಗೆ ಕೊಳಚೆ ನೀರು ಹರಿಯುತ್ತಿದೆ. ಸ್ಥಳೀಯರ ಪ್ರಕಾರ ಈ ತ್ಯಾಜ್ಯ ನೀರು ಶೌಚಾಲಯಕ್ಕೆ ಸಂಬಂ ಧಿಸಿದ್ದಾಗಿದ್ದು, ಚರಂಡಿಯಲ್ಲಿ ಹರಿದು ನೇರವಾಗಿ ಸುತ್ತಮುತ್ತ ಪರಿಸರದಲ್ಲಿ ಹರಡುತ್ತಿದೆ ಅಲ್ಲದೇ ಹೆದ್ದಾರಿಗೂ ಸಹ ಹರಿಯುತ್ತಿರುವುದರಿಂದ ವಾಹನಗಳು ಸಂಚರಿಸುವಾಗ ಪಾದಾಚಾರಿಗಳಿಗೆ ಕೆಸರಿನಂತೆ ಸಿಂಪಡನೆ ಆಗುತ್ತಿದೆ ಎಂದು
ದೂರಿಕೊಂಡಿದ್ದಾರೆ.

ಇದೇ ರೀತಿಯಲ್ಲಿ ನಿರಂತರವಾಗಿ ಹರಿದರೇ ಈ ಭಾಗದಲ್ಲಿ ರೋಗಗಳು ಹರಡುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹಳೆಯಂಗಡಿ ಹೆದ್ದಾರಿಯಲ್ಲಿ ಅಲ್ಲಲ್ಲಿ ತ್ಯಾಜ್ಯ ಬಿಸಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ಕೊಳಚೆ ನೀರಿನ ಸಮಸ್ಯೆಗೂ ಪಂಚಾಯತ್‌ ಸೂಕ್ತ ಪರಿಹಾರ ನೀಡಬೇಕಾಗಿದೆ.

ಕಾನೂನು ಕ್ರಮ
ಸ್ಥಳೀಯರು ನೀಡಿದ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ತತ್‌ ಕ್ಷಣ ಸಂಬಂ ಧಿಸಿದವರಿಗೆ ನೋಟೀಸ್‌ ನೀಡಲಾಗುವುದು. ಸ್ಪಂದಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಬೂಬಕ್ಕರ್‌
  ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next