Advertisement
ಈ ವಿಚಾರವಾಗಿ ಆರೋಪಿಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಸೂಲಗಿತ್ತಿಯಾಗಿದ್ದ ವಯೋವೃದ್ಧೆ ಅಪ್ಪಿ ಶೆಡ್ತಿ ಸವಣಾಲು ಗ್ರಾಮದಲ್ಲಿ ಚಿರಪರಿಚಿತೆ. ಸುತ್ತಮುತ್ತ ಹಳ್ಳಿಯಲ್ಲಿ ಸೀಮಿತ ಆಸ್ಪತ್ರೆಗಳಿದ್ದ ಕಾಲದಿಂದ ಹೆರಿಗೆಗೆ ಪ್ರಕ್ರಿಯೆ ನಡೆಸುತ್ತಿದ್ದರು. ಸುಮಾರು 500ಕ್ಕೂ ಮಿಕ್ಕಿ ಹೆರಿಗೆ ಮಾಡಿಸಿದ ಈ ಅಜ್ಜಿಗೆ ಕಳೆದ 3 ವರ್ಷಗಳಿಂದ ಮೈ ಹುಷಾರಿಲ್ಲದ ಕಾರಣದಿಂದ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದಾರೆ.
Related Articles
ಮಲಗಿದ್ದ ಅಜ್ಜಿಗೆ ಮಗ ಹಾಗೂ ಮೊಮ್ಮಗ ಮದ್ಯ ಸೇವಿಸಿ ಕಳೆದ ಮೂರು ದಿನಗಳ ಹಿಂದೆ ಹಲ್ಲೆ ನಡೆಸಿದ್ದಲ್ಲದೆ ಎಳೆದೊಯ್ದು ಎತ್ತಿ ನೆಲಕ್ಕೆ ಅಪ್ಪಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Advertisement
ಈ ವಿಚಾರವಾಗಿ ಖಂಡನೆಗಳು ಬಂದಿದ್ದು, ಪೊಲೀಸರಿಗೂ ಮಾಹಿತಿ ತಿಳಿದ ತತ್‌ಕ್ಷಣ ಬೆಳ್ತಂಗಡಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ. ಹಾಗೂ ಎಸ್.ಐ. ನಂದಕುಮಾರ್ ಆರೋಪಿಗಳನ್ನು ಬಂಧಿಸಿ ಕಲಂ: 323, 504 ಐಪಿಸಿ ಮತ್ತು 24 ಕಾಯ್ದೆ 2007ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಅಜ್ಜಿ ಆಸ್ಪತ್ರೆಗೆಮಗ ಮತ್ತು ಮೊಮ್ಮಗನಿಂದ ಹಲ್ಲೆಗೊಳಗಾದ ಅಜ್ಜಿಯನ್ನು ಪೊಲೀಸರ ಸೂಚನೆಯಂತೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಲಾಗಿದೆ.