Advertisement
ಇತ್ತೀಚಿನ ದಿನಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗೆ ನಗರದ ಜನರು ಹೆಚ್ಚು ಮಾರು ಹೋಗಿದ್ದು, ಪರಿಣಾಮ ತಮ್ಮ ಸೇವಾ ವ್ಯಾಪ್ತಿ ವಿಸ್ತರಿಸುವ ಭರದಲ್ಲಿ ಓಲಾ ಸಂಸ್ಥೆಯು ನಿಯಮಗಳನ್ನು ಗಾಳಿಗೆ ತೂರಿ, ಆ್ಯಪ್ ಆಧಾರಿತ ಬೈಕ್ ಸಂಚಾರ ಸೇವೆ ಆರಂಭಿಸಿದೆ. ಆ ಮೂಲಕ ನಿಯಮಗಳನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳು -2018ರ 11 (1)ರ ರಂತೆ ಸಂಸ್ಥೆಗೆ ನೀಡಲಾಗಿದ್ದ ಪರವಾನಗಿ ಅಮಾನತುಗೊಳಿಸಿ, ತಕ್ಷಣದಿಂದಲೇ ಸೇವೆ ಸ್ಥಗಿತಗೊಳಿಸಬೇಕೆಂದು ಸಾರಿಗೆ ಇಲಾಖೆ ಆದೇಶಹೊರಡಿಸಿದೆ.
Related Articles
Advertisement
ಬೈಕ್ ಸೇವೆ ಕೇವಲ ಪ್ರಾಯೋಗಿಕವಷ್ಟೇರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಓಲಾ ಮೂಲಸೌಕರ್ಯ, ಉತ್ತಮ ಸಂಚಾರ ವ್ಯವಸ್ಥೆ, ಹೊಸ ತಂತ್ರಜ್ಞಾನಗಳ ಬಳಕೆಯಲ್ಲಿ ಮುಂದಿದೆ. ಬೇರೆ ಸಂಸ್ಥೆಗಳು ಅನಧಿಕೃತವಾಗಿ ಬೈಕ್ ಸೇವೆ ಮುಂದುವರಿಸುತ್ತಿವೆ. ಆದರೆ, ಓಲಾ ಸಂಸ್ಥೆಯಿಂದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತಾದರೂ, ಕೆಲವು ತಿಂಗಳ ಹಿಂದೆಯೇ ಬೈಕ್ ಸೇವೆ ಸ್ಥಗಿತಗೊಳಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಸರ್ಕಾರ ಹೊರಡಿಸಿರುವ ಅಮಾನತು ಆದೇಶದ ಕುರಿತು ನೇರವಾಗಿ ಸರ್ಕಾರದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ನಡೆಯೇನು? ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಓಲಾ ಸಂಸ್ಥೆಗೆ ನೀಡಿರುವ ಪರವಾನಗಿಯನ್ನು ವಾಪಸ್ ನೀಡುವಂತೆ ಸಾರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ. ಅದರಂತೆ ಓಲಾ ಸಂಸ್ಥೆಯವರು ಮೂರು ದಿನಗಳಲ್ಲಿ ಪರವಾನಗಿಯನ್ನು ಸಾರಿಗೆ ಇಲಾಖೆಗೆ ಸಲ್ಲಿಸಬೇಕಾಗಿದೆ. ಒಂದೊಮ್ಮೆ ಸಲ್ಲಿಸದಿದ್ದರೆ ಅಂತಹ ಕಾರುಗಳನ್ನು ಹಿಡಿದು ಜಪ್ತಿ ಮಾಡಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಓಲಾ ಸಂಸ್ಥೆಯವರು ನಿಯಮಗಳನ್ನು ಗಾಳಿಗೆ ತೂರಿ ಬೈಕ್ ಸೇವೆ ಆರಂಭಿಸಿದ್ದರಿಂದ ಕ್ರಮಕೈಗೊಳ್ಳುವಂತೆ ಸಂಚಾರ ಇಲಾಖೆಗೆ ದೂರು ನೀಡಲಾಗಿತ್ತು. ಅದರಂತೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕಾನೂನು ಬಾಹಿರವಾಗಿ ಬೈಕ್ ಸೇವೆ ಒದಗಿಸುತ್ತಿರುವುದನ್ನು ಪತ್ತೆ ಹಚ್ಚಿದ್ದು, ನಾಲ್ಕೈದು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
● ತನ್ವೀರ್ ಪಾಷ, ರಾಜ್ಯ ಓಲಾ, ಉಬರ್ ಚಾಲಕರು, ಮಾಲೀಕರ ಸಂಘ