Advertisement

ಓಲಾ ಎಲೆಕ್ಟ್ರಿಕ್‌ ವಾಹನಗಳು

09:30 AM Apr 17, 2018 | Team Udayavani |

ಹೊಸದಿಲ್ಲಿ: ಮುಂದಿನ ಒಂದು ವರ್ಷದಲ್ಲಿ ಕ್ಯಾಬ್‌ ಸೇವೆ ಸಂಸ್ಥೆ ಓಲಾ 10 ಸಾವಿರ ಎಲೆಕ್ಟ್ರಿಕ್‌ ವಾಹನಗಳನ್ನು ಪರಿಚಯಿಸಲು ನಿರ್ಧರಿಸಿದೆ. ಈ ಪೈಕಿ ಹೆಚ್ಚಿನವು ಇ-ರಿಕ್ಷಾ ಆಗಿರಲಿದೆ. 2021ರ ವೇಳೆಗೆ 10 ಲಕ್ಷ ಎಲೆಕ್ಟ್ರಿಕ್‌ ವಾಹನಗಳ ಗುರಿಯನ್ನೂ ಹೊಂದಿದೆ. ಕಳೆದ ವರ್ಷ ನಾಗ್ಪುರದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಪರಿಚಯಿಸಲಾಗಿತ್ತು. ಎಲೆಕ್ಟ್ರಿಕ್‌ ಕ್ಯಾಬ್‌, ಆಟೋ ರಿಕ್ಷಾ, ಬಸ್‌ ಹಾಗೂ ಮೇಲ್ಛಾವಣಿ ಸೌರ ಘಟಕಗಳು ಹಾಗೂ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ನಾಗ್ಪುರದಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ನಗರಗಳಲ್ಲಿ ಎಲೆಕ್ಟ್ರಿಕ್‌ ವಾಹನ ಪರಿಚಯಿಸಲಾಗುತ್ತದೆ ಎಂದು ಕಂಪೆನಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next