ಚೆನ್ನೈ: ಕ್ಯಾಬ್ ಹತ್ತುವ ಮುನ್ನ ಒಟಿಪಿ(ಒನ್ ಟೈಮ್ ಪಾಸ್ ವರ್ಡ್) ನೀಡಲು ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ಓಲಾ ಚಾಲಕ ಪ್ರಯಾಣಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಂದು ಹಾಕಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
ಒಟಿಪಿ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಓಲಾ ಚಾಲಕ ಪ್ರಯಾಣಿಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ:ಚಂದ್ರಶೇಖರ್ ಗುರೂಜಿ ಹತ್ಯೆ: ‘ನಮಸ್ಕಾರ ಗುರೂಜಿ’ ಎಂದು ಕಾಲಿಗೆರಗಿ ಚುಚ್ಚಿ ಚುಚ್ಚಿ ಕೊಂದರು!
ಮೃತ ವ್ಯಕ್ತಿಯನ್ನು ಉಮೇಂದ್ರ ಎಂದು ಗುರುತಿಸಲಾಗಿದೆ. ಇವರು ಕೊಯಮತ್ತೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಮೇಂದ್ರ ಅವರು ಹೆಂಡತಿ, ಮಕ್ಕಳೊಂದಿಗೆ ಚೆನ್ನೈನಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು.
ಭಾನುವಾರ ಉಮೇಂದ್ರ ಅವರು ಪತ್ನಿ, ಮಕ್ಕಳೊಂದಿಗೆ ಸಿನಿಮಾ ವೀಕ್ಷಿಸಿ ಮನೆಗೆ ವಾಪಸ್ ಆಗುವ ಸಂದರ್ಭದಲ್ಲಿ ಪತ್ನಿ ಕ್ಯಾಬ್ ಬುಕ್ ಮಾಡಿದ್ದರು. ಓಲಾ ಕಾರು ಬಂದಾಗ ಉಮೇಂದ್ರ ಅವರು ಪತ್ನಿ, ಮಕ್ಕಳೊಂದಿಗೆ ಓಲಾ ಹತ್ತಿ ಕುಳಿತಾಗ, ಡ್ರೈವರ್ ಎಲ್ಲರೂ ಕೆಳಗಿಳಿಯಿರಿ ಎಂದು ಹೇಳಿ, ಓಟಿಪಿ ಮೊದಲು ತೋರಿಸಿ ಎಂದಿದ್ದ. ಆಗ ಉಮೇಂದ್ರ ಓಲಾದಿಂದ ಕೆಳಗಿಳಿದು ಕಾರಿನ ಬಾಗಿಲನ್ನು ರಭಸವಾಗಿ ಹಾಕಿದ್ದರು. ಆಗ ಡ್ರೈವರ್ ಮತ್ತು ಉಮೇಂದ್ರ ನಡುವೆ ಮಾತಿನ ಚಕಮಕಿ ನಡೆದಿತ್ತು.
ತನಿಖಾಧಿಕಾರಿಯ ಮಾಹಿತಿ ಪ್ರಕಾರ, ಓಲಾ ಚಾಲಕ ಮೊದಲು ಉಮೇಂದ್ರ ಅವರ ಫೋನ್ ಅನ್ನು ಎಸೆದು, ಹೊಡೆಯಲು ಪ್ರಾರಂಭಿಸಿದ್ದ. ಹೀಗೆ ಹಲವಾರು ಬಾರಿ ಹೊಡೆದ ಪರಿಣಾಮ ಉಮೇಂದ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ನಂತರ ಉಮೇಂದ್ರ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ತಿಳಿಸಿದ್ದಾರೆ.