ಲಾಕ್‌ಡೌನ್ ಸಡಿಲಿಕೆ ಮಾಡಿ, ಅಂಗಡಿ-ಮುಗ್ಗಟ್ಟುಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ.
Advertisement
ಕಳೆದ ವಾರವಷ್ಟೇ ಸಲೂನ್, ಬ್ಯೂಟಿಪಾರ್ಲರ್, ಸ್ಪಾ ಸೇರಿದಂತೆ ಇತರೆ ಸಣ್ಣಪುಟ್ಟ ಉದ್ಯಮಗಳ ಕಾರ್ಯಾಚರಣೆಗೆ ಅವಕಾಶ ಕೊಟ್ಟಿದ್ದ ಸರಕಾರ ಇದೀಗ ಮಾಲ್‌ಗಳ ಪುನರಾರಂಭಕ್ಕೂ ಹಸಿರು ನಿಶಾನೆ ತೋರಿದೆ. ಈ ಹಿನ್ನೆಲೆಯಲ್ಲಿ ನಗರದ ಪೆನ್ ಸ್ಕ್ವೆರ್‌ಮಾಲ್‌ಗಳು ಶುಕ್ರವಾರ ಎಂದಿನಂತೆ ಕಾರ್ಯಾಚರಣೆ ಪ್ರಾರಂಭಿಸಿದ್ದು, ಜನರು ಸುರಕ್ಷಾ ಕ್ರಮಗಳನ್ನು ಪಾಲಿಸುವ ಮೂಳಕ ಶಾಪಿಂಗ್ ಮಾಲ್ ಅತ್ತ ಧಾವಿಸಿದ್ದಾರೆ. ಸರಕಾರ ಸೂಚಿಸಿದಂತೆ ಮಾಸ್ಕ್ ಧರಿಸುವುದಲ್ಲದೇ, ಸಾಮಾಜಿಕ ಅಂತರ ನಿಯಮವನ್ನು ಗ್ರಾಹಕರು ಕಾಯ್ದುಕೊಂಡಿದ್ದಾರೆ. ಹಾಗಾಗಿ ಸರಕಾರದ ಮಾರ್ಗಸೂಚಿಗಳ ಪಾಲನೆ ತೃಪ್ತಿಕರವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮುಂಬರುವ ವಾರಗಳಲ್ಲಿ ರೆಸ್ಟೋರೆಂಟ್, ಚಿತ್ರಮಂದಿರಗಳು ಸೇರಿದಂತೆ ಇತರ ವ್ಯವಹಾರಗಳ ಪ್ರಾರಂಭಕ್ಕೆ ಅನುಮತಿ ನೀಡುವ ನಿರೀಕ್ಷೆಯಿದೆ. ಶುಕ್ರವಾರ ರಾಜ್ಯಾದ್ಯಂತ ವ್ಯಾವಹಾರಿಕ ಚಟುವಟಿಕೆಗಳು ಆರಂಭಗೊಂಡಿರುವ ಬೆನ್ನಲ್ಲೇ ಒಂದೇ ದಿನ 3,748 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 230 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.