Advertisement

ಒಕ್ಕಲಿಗ, ಬ್ರಾಹ್ಮಣರ ಓಟು ನಿರ್ಣಾಯಕ

06:37 AM Mar 22, 2019 | |

ಕ್ಷೇತ್ರದ ವಸ್ತುಸ್ಥಿತಿ: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿದೆ. ಬ್ರಾಹ್ಮಣರು ಮತ್ತು ಒಕ್ಕಲಿಗರು ಹೆಚ್ಚಾಗಿರುವ ಈ ಕ್ಷೇತ್ರದ ಮತದಾರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಎರಡರಲ್ಲೂ ಬಿಜೆಪಿಯನ್ನು ಬೆಂಬಲಿಸಿದ್ದಾನೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.68.3ರಷ್ಟು ಮತಗಳು ಕಮಲ ಪಕ್ಷದ ಪಾಲಾಗಿದ್ದವು.

Advertisement

ಚಲಾವಣೆಯಾದ 1.18 ಲಕ್ಷ ಮತಗಳ ಪೈಕಿ  81,075 ಮತಗಳು ಬಿಜೆಪಿ ಅಭ್ಯರ್ಥಿಯಾಗಿದ್ದ ಕೇಂದ್ರ ಸಚಿವ ಸದಾನಂದಗೌಡ ಅವರ ಪರ ಚಲಾವಣೆಯಾಗಿದ್ದವು. ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಸಿ.ನಾರಾಯಣಸ್ವಾಮಿ 29,730 ಮತಗಳು, ಆಮ್‌ ಆದ್ಮಿ ಪಕ್ಷದ ಬಾಬು ಮ್ಯಾಥ್ಯೂ 3,789 ಹಾಗೂ ಜೆಡಿಎಸ್‌ನ ಅಬ್ದುಲ್‌ ಅಜೀಂ 3,161 ಮತ ಪಡೆದಿದ್ದರು. ಕ್ಷೇತ್ರದಿಂದ ಈ ಬಾರಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಕಾಂಗ್ರೆಸ್‌ ದೇವೇಗೌಡರ ಬೆಂಬಲಿಕ್ಕೆ ನಿಂತಿರುವುದು ಕುತೂಹಲ ಕೆರಳಿಸಿದೆ. ಸದ್ಯ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಹೊಂದಿದೆ ಎಂಬುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ.ಇನ್ನೂ ಪಾಲಿಕೆ ವಿಚಾರಕ್ಕೆ ಬಂದಾಗ ಏಳು ವಾರ್ಡ್‌ಗಳ ಪೈಕಿ ಐವ್ವರು,ಬಿಜೆಪಿ ಸದಸ್ಯರಿದ್ದಾರೆ.2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಾಬ್ರಲ್ಯ ಮೆರೆದರೆ ಜೆಡಿಎಸ್‌ ಪಕ್ಷ ಯಾವುದೇ ಖಾತೆಯನ್ನು ತೆರೆದಿಲ್ಲ. ಮಲ್ಲೇಶ್ವರ ವಿಧಾನ ಸಭಾಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಬಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಸಮುದಾಯಗಳ ಓಟು ನಿರ್ಣಾಯಕ ಎನಿಸಿವೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಅಜಾದ್‌ ಚಂದ್ರಶೇಖರ್‌ ಕ್ರೀಡಾಂಗಣದಲ್ಲಿ ಒಳಾಂಗಣ ವಾಲಿಬಾಲ್‌ ಕೋಟ್‌ ನಿರ್ಮಾಣ
-ಪ್ಯಾಲೇಸ್‌ ಗುಟ್ಟಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ

ನಿರೀಕ್ಷೆಗಳು
-ಮಲ್ಲೇಶ್ವರ ರೈಲ್ವೆ ನಿಲ್ದಾಣದ ಅಭಿವೃದ್ಧಿ
-ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ

Advertisement

-ವಾರ್ಡ್‌ಗಳು- 7
-ಬಿಜೆಪಿ-5
-ಕಾಂಗ್ರೆಸ್‌- 2
-ಜೆಡಿಎಸ್‌-0

-ಜನಸಂಖ್ಯೆ-3,45,367
-ಮತದಾರರ ಸಂಖ್ಯೆ-2,15,364
-ಪುರುಷರು-1,08,442
-ಮಹಿಳೆಯರು-1,06,922

2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು-1,18,904 (61%)
-ಬಿಜೆಪಿ ಪಡೆದ ಮತಗಳು- 81,075 (68.2%)
-ಕಾಂಗ್ರೆಸ್‌ ಪಡೆದ ಮತಗಳು- 29,730 (25.0%)
-ಜೆಡಿಎಸ್‌ ಪಡೆದ ಮತಗಳು- 3,161 (2.7%)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಅಶ್ವತ್ಥನಾರಾಯಣ ಬಿಜೆಪಿ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು-6
-ಕಾಂಗ್ರೆಸ್‌ ಸದಸ್ಯರು-1
-ಜೆಡಿಎಸ್‌-0

ಮಾಹಿತಿ: ದೇವೇಶ್‌ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next