Advertisement

ವೇಗದ ಇಲೆಕ್ಟ್ರಿಕ್‌  ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ

11:42 AM Dec 20, 2017 | |

ನವದೆಹಲಿ: ದೇಶದ ಅತ್ಯಂತ ವೇಗದ ಇಲೆಕ್ಟ್ರಿಕ್‌ ಸ್ಕೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಕೂಟರ್‌ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಒಕಿನವಾ ಕಂಪನಿಗೆ ಸೇರಿದ ಸ್ಕೂಟರ್‌ ಇದಾಗಿದೆ.

Advertisement

ನವದೆಹಲಿಯಲ್ಲಿ ಎಕ್ಸ್‌-ಶೋರೂಮ್‌ ಬೆಲೆ 59,889 ರೂ.ಎಂದು ನಿಗದಿ ಮಾಡಲಾಗಿದೆ. ಒಂದು ಬಾರಿ ಅದನ್ನು ಚಾರ್ಜ್‌ ಮಾಡಿದರೆ 170-220 ಕಿಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದು ಪರಿಸರಕ್ಕೆ ಶೂನ್ಯ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ. ತೆಗೆದು ಜೋಡಿಸಬಹುದಾದ ಲೀಥಿಯಂ ಬ್ಯಾಟರಿಯನ್ನು ಸ್ಕೂಟರ್‌ಗೆ ಅಳವಡಿಸಲಾಗಿದೆ. ಶೇ.80ರಷ್ಟು ಚಾರ್ಜ್‌ ಆಗಲು 45 ನಿಮಿಷ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next