Advertisement

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

08:02 PM Apr 30, 2024 | Team Udayavani |

ಕಾರ್ಕಳ: ಟಿಪ್ಪರ್‌ ಚಾಲಕ ಟಿಪ್ಪರನ್ನು ಮುನ್ಸೂಚನೆ ನೀಡದೆ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಟಿಪ್ಪರ್‌ ಸ್ಕೂಟರ್‌ ಮೇಲೆ ಚಲಿಸಿ ಸ್ಕೂಟರ್‌ ಜಖಂಗೊಂಡ ಘಟನೆ ಮುಲ್ಲಡ್ಕ ಗ್ರಾಮದಲ್ಲಿ ನಡೆದಿದೆ.

Advertisement

ಸೋಮನಾಥ ಮುಂಡ್ಕೂರು ಅವರು ಸ್ಕೂಟರ್‌ ಅನ್ನು ಸಂಕಲಕರಿಯ ಕಡೆಯಿಂದ ಮುಲ್ಲಡ್ಕದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದರು. ಅದೇ ದಾರಿಯಲ್ಲಿ ಮುಂಡ್ಕೂರಿನಿಂದ ಮುಲ್ಲಡ್ಕ ಕಡೆಗೆ ಟಿಪ್ಪರ್‌ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next