ಮಂಗಳೂರು: ಓಖಿ ಚಂಡಮಾರುತದ ಪರಿಣಾಮವಾಗಿ ಅರಬ್ಬೀ ಸಮುದ್ರದಲ್ಲಿ ಅಮೇನಿ ಕಡಮ ಬಳಿ ಸರಕುಸಾಗಾಣಿಗೆ ಹಡಗುಗಳೆರಡು ಮುಳುಗಡೆಯಾಗಿದ್ದು, ಕರಾವಳಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿ ಒಂದು ಹಡಗಿನಲ್ಲಿದ್ದ 6 ಮಂದಿ ಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೊಂದು ಹಡಗಿನಲ್ಲಿದ್ದ 8 ಮಂದಿ ಸಿಬಂದಿಗಳು ನಾಪತ್ತೆಯಾಗಿದ್ದು ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ನವೆಂಬರ್ 30 ರಂದು ಮಂಗಳೂರಿನಿಂದ ಜಲ್ಲಿ, ಎಮ್ ಸ್ಯಾಂಟ್ ಮತ್ತು ದಿನಸಿ ತುಂಬಿಕೊಂಡು ಲಕ್ಷದ್ವೀಪಕ್ಕೆ ಹೊರಟಿದ್ದ 2 ಹಡಗುಗಳಲ್ಲಿ ಒಟ್ಟು14 ಮಂದಿ ಸಿಬಂದಿಗಳಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದರು. ಆ ಪೈಕಿ ಒಂದು ಬೋಟ್‌ನಲ್ಲಿ ಸಂಕಷ್ಟದಲ್ಲಿದ್ದ 6 ಮಂದಿಯನ್ನು ಕೋಸ್ಟಲ್ ಗಾರ್ಡ್ ಸಿಬಂದಿ ಶುಕ್ರವಾರ ಹರಸಾಹಸ ನಡೆಸಿ ರಕ್ಷಣೆ ಮಾಡಿರುವುದಾಗಿ ವರದಿಯಾಗಿದೆ.
ಸಮುದ್ರದಲ್ಲಿ ಭಾರೀ ಗಾಳಿ ಮತ್ತು ಅಲೆಗಳ ಅಬ್ಬರವಿದ್ದ ಕಾರಣ ಹಡಗುಗಳು ಮುಳುಗಡೆಯಾಗಿವೆ.
ಇದೀಗನಾಪತ್ತೆಯಾಗಿರುವ 8 ಮಂದಿಯನ್ನು ಶನಿವಾರ ನಸುಕಿನಿಂದಲೇ ರಕ್ಷಣಾ ಕಾರ್ಯ ಮುದುವರೆಸಿ ಹೆ ಮಂದಿ ತಮಿಳು ನಾಡು ಮೂಲದ ಸಿಬಂದಿಗಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೆಲಿಕ್ಯಾಪ್ಟರ್‌ಗಳನ್ನು ಬಳಿಸಕೊಂಡು ರಕ್ಷಣೆಗೆ ಯತ್ನಿಸಲಾಗಿದೆ. ಆದರೆ ಪ್ರತಿಕೂಲ ಹವಮಾನ ರಕ್ಷಣಾ ಕಾರ್ಯಕ್ಕೆ ಭಾರೀ ತೊಂದರೆ ಉಂಟು ಮಾಡಿದೆ.
ಮುಳುಗಡೆಯಾಗಿರುವ ಒಂದು ಹಡಗು ತಮಿಳುನಾಡಿನ ಮೂಲದ್ದಾಗಿದ್ದು, ಇನ್ನೊಂದು ಬೋಟ್ ಮಂಗಳೂರಿನದ್ದು ಎಂದು ತಿಳಿದು ಬಂದಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.