ಕುಣಿಗಲ್: ರಾಜ್ಯ ಒಕ್ಕಲಿಗ ಸಂಘ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿನ ಹಲವು ಒಕ್ಕಲಿಗ ಸಂಘಗಳು ಶಾಲಾ ಕಾಲೇಜುಗಳು ಪ್ರಾರಂಭಿಸಿ ಡೋನೆಷನ್ ಮೂಲಕ ಹಣ ಗಳಿಕೆಯಲ್ಲಿ ತೊಡಗಿವೆ, ಆದರೆ ಸಮುದಾಯದ ಜನರ ಅಭಿವೃದ್ಧಿ ಗೊಳಿಸುವಲ್ಲಿ ವಿಫಲಗೊಂಡಿವೆ ಎಂದು ಅರೇಶಂಕರಮಠದ ಸಿದ್ದರಾಮಚೈತನ್ಯ ಸ್ವಾಮೀಜಿ ಆರೋಪಿಸಿದರು.
ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ತಾಲೂಕು ಒಕ್ಕಲಿಗ ಧರ್ಮ ಮಹಾ ಸಭಾ ನೂತನ ಘಟಕ್ಕೆಚಾಲನೆ ನೀಡಿ ಮಾತನಾಡಿ, ರಾಜ್ಯ ಒಕ್ಕಲಿಗ ಸಂಘವನ್ನು ಒಕ್ಕಲಿಗ ಜನಪ್ರತಿ ನಿಧಿಗಳು, ರಾಜಕಾರಣಿಗಳು ಹಾಗೂ ಬಂಡವಾಳ ಶಾಹಿ ಗಳು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ನಡೆಸಿದ ಜಾತಿ ಜನ ಗಣತಿಯಲ್ಲಿ ಸಮುದಾಯದ ಉಪ ಜಾತಿಗಳನ್ನು ರಾಜ್ಯದ ಮುಖಂಡರು ಸೇರಿಸದೇ ಒಕ್ಕಲಿಗ ಎಂದು ಸೇರಿಸಿದ ಕಾರಣ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಶೇ.10 ರಷ್ಟು ಮೀಸಲಾತಿ ಸೌಲಭ್ಯದಿಂದ ನಮ್ಮಸಮುದಾಯದ ಜನರು ವಂಚಿತರಾಗಿದ್ದಾರೆಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ನೂತನ ಪದಾಧಿಕಾರಿಗಳು: ಕೃಷ್ಣೇಗೌಡ ಅಧ್ಯಕ್ಷ, ನಾಗರಾಜು ಉಪಾಧ್ಯಕ್ಷ, ಡಾ.ರೇವಣ್ಣಗೌಡ ಪ್ರಧಾನ ಕಾರ್ಯದರ್ಶಿ, ವೆಂಕಟೇಶ್ ಸಂಘಟನಾ ಕಾರ್ಯದರ್ಶಿ, ಮಹೇಶ್‌ಗೌಡ ಕಾರ್ಯದರ್ಶಿ, ಪುನೀತ್, ಜಗದೀಶ್, ಲೋಕೇಶ್, ಚಂದ್ರಶೇಖರ್, ಮೋಹನ್, ಕುಮಾರ್, ಶ್ರೀನಿವಾಸ್ ಸಂಚಾಲಕರು, ಜಿ.ಪ್ರಕಾಶ್, ಎಂ.ಮಹೇಶ್, ನಾಗೇಂದ್ರ ಖಜಾಂಚಿಯಾಗಿ ಆಯ್ಕೆಗೊಂಡರು.