ಹುಮನಾಬಾದ: ಶೇ.70ರಷ್ಟು ವಿದೇಶದಿಂದ ಖಾದ್ಯ ತೈಲಗಳನ್ನು ನಾವುಗಳು ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ರೈತಪರ ಯೋಜನೆಗಳು ಜಾರಿಮಾಡಿದ್ದಾರೆ. ನಮ್ಮ ರೈತರು ಹೆಚ್ಚಿನ ಪ್ರಮಾಣದಲ್ಲಿ ತೈಲ ಉತ್ಪನಗಳನ್ನು ಬೆಳೆಸುವ ಮೂಲಕ ದೇಶ ಸ್ವಾವಲಂಬನೆಗೆ ಸಹಕರಿಸಬೇಕಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಬಿಜೆಪಿ ಘಟಕದಿಂದ ಶುಕ್ರವಾರ ಏರ್ಪಡಿಸಿದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ರೈತರು ಸೂರ್ಯಕಾಂತಿ, ಸೋಯಾ, ನೆಲಕಡಲೆ ಸೇರಿದಂತೆ ವಿವಿಧ ತೈಲ ಉತ್ಪನಗಳು ಬೆಳೆದರೆ ದೇಶ ಸ್ವಾವಲಂಬಿಯಾಗುತ್ತದೆ. ವಿದೇಶದಿಂದ ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ರೈತರ ಆದಾಯ ದ್ವಿಗುಣ ಮಾಡಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಗೊಂದು ಬೆಳೆ ಬೆಳೆಸುವ ಪದ್ಧತಿ ಘೋಷಣೆಯಾಗಿದೆ. ರೈತರು ಬೆಳೆದ ಉತ್ಪನಗಳಿಗೆ ಉತ್ತಮ ಬೆಲೆ ನೀಡುವ ಮಹತ್ವದ ಕಾರ್ಯ ಸರ್ಕಾರ ನಿರಂತರ ಮಾಡುತ್ತಿದೆ ಎಂದರು.
ಇದನ್ನೂ ಓದಿ:ಚುನಾವಣಾ ಕರ್ತವ್ಯದಲ್ಲಿದ್ದ ಪೇದೆ ಸಾವು : ಊಟ ತರಲು ಹೋದವ ಮಸನ ಸೇರಿದ
ಬೀದರ ಜಿಲ್ಲೆಯಲ್ಲಿ ಉದ್ದು, ಹೆಸರು, ತೊಗರಿ ಬೆಳೆಯಲಾಗುತ್ತಿದ್ದು, ಈಗಾಗಲೇ ಪ್ರಧಾನಿಗಳಿಗೆ ಭೇಟಿಮಾಡಿ ಉದ್ದಿಗೆ 6300 ಹಾಗೂ ಹೆಸರಿಗೆ 7570 ಬೆಂಬಲ ಬೆಲೆ ಈಗಾಗಲೇ ಘೋಷಣೆ ಮಾಡಲಾಗಿದೆ. ಅಲ್ಲದೆ, ತೊಗರಿ ಬೆಳೆಗೂ ಕೂಡ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು ಎಂಬುವುದು ಈ ಭಾಗದ ರೈತರ ಬೇಡಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕೂಡ ಪರಿಶೀಲನೆ ನಡೆಸುವ ಮೂಲಕ ಪರಿಗಣನೆಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ದೇಶದ ರಕ್ಷಣೆ, ದೇಶದ ಅಭಿವೃದ್ಧಿ, ವಿದೇಶದಲ್ಲಿ ಗೌರವ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಪ್ರಧಾನಿ ನರೆಂದ್ರ ಮೋದಿ ಅವರಿಗೆ ಎಲ್ಲರೂ ಆಶೀವರ್ದಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಶರಣು ಸಲಗಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಹಿರಿಯ ಮುಖಂಡ ಸುಭಾಷ ಕಲ್ಲೂರ್, ಯುವ ಮುಖಂಡ ಡಾ| ಸಿದ್ದಲಿಂಗಪ್ಪ ಪಾಟೀಲ, ಬಸವರಾಜ ಆರ್ಯ, ಸೋಮನಾಥ ಪಾಟೀಲ, ಪದ್ಮಾಕರ್ ಪಾಟೀಲ, ವಿನಾಯ ಮಂಡಾ, ಬಾಬು ಟೈಗರ್, ನಾಗೇಶ ಕಲ್ಲೂರ್, ಸಂತೋಷ ಪಾಟೀಲ ಸೇರಿದಂತೆ ಅನೇಕರು ಇದ್ದರು.