Advertisement
ಹಣದುಬ್ಬರ ಆಧುನಿಕ ಅರ್ಥಶಾಸ್ತ್ರದ ಕೇಂದ್ರಬಿಂದುವಾ ಗಿದ್ದು ಇದೀಗ ವಿಶ್ವವ್ಯಾಪಿ ವಿದ್ಯಮಾನವಾಗಿದೆ. ಸಾಮಾನ್ಯ ಭಾಷೆಯಲ್ಲಿ ಹಣದುಬ್ಬರ ಎಂದರೆ ಸರಕು ಸಾಮಗ್ರಿಗಳ ಬೆಲೆಗಳು ನಿರಂತರವಾಗಿ ಏರುವ ಪ್ರಕ್ರಿಯೆ. ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಸನ್ನಿವೇಶವೇ ಹಣದುಬ್ಬರ. ಆರ್ಥಿಕತೆಯಲ್ಲಿ ವೆಚ್ಚ ಹೆಚ್ಚಳವಾದಾಗ ಬೆಲೆ ಏರಿಕೆಯಾಗುತ್ತದೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮತ್ತು ಪೂರೈಕೆ ಇದ್ದರೂ ಬೆಲೆ ಏರುತ್ತದೆ. ಸರಕುಗಳ ಬೇಡಿಕೆ ಪೂರೈಕೆಗಿಂತ ಅಧಿಕವಿದ್ದಾಗ ಹಣದುಬ್ಬರ ಸಂಭವಿಸುತ್ತದೆ. ಪ್ರಚಲಿತ ವಿದ್ಯಮಾನವನ್ನು ಅವಲೋಕಿಸುವಾಗ ಸಗಟು ಮತ್ತು ರಿಟೇಲ್ ಹಣದುಬ್ಬರ ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು.
ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಆರ್‌ಬಿಐ ಮಹತ್ತರ ಪಾತ್ರ ವಹಿಸುತ್ತದೆ. ಬಡ್ಡಿದರ ಏರಿಕೆಯಿಂದ ಸಾಧ್ಯವಾದರೂ ಅದು ಸಂಪೂರ್ಣವಾಗಿ ಅಲ್ಲ. ಬಡ್ಡಿದರ ಏರಿಕೆಯಾದಾಗ ಬೇಡಿಕೆಯೂ ಕಡಿಮೆಯಾಗಿ ಬೆಲೆಗಳು ಇಳಿಯುತ್ತವೆ. ಆದರೆ ಆರ್ಥಿಕಾಭಿವೃದ್ಧಿಗೆ ಬೇಡಿಕೆಯೇ ಮಹತ್ವಪೂರ್ಣವಾಗಿದೆ. ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಬಡ್ಡಿದರಗಳನ್ನು ಏರಿಸುವುದು ಕಷ್ಟ. ಬಡ್ಡಿದರ ಹೆಚ್ಚಳವಾದರೆ ಹೂಡಿಕೆ, ಖರ್ಚು ವೆಚ್ಚಗಳು ಬಲವಂತವಾಗಿ ಇಳಿಯುತ್ತವೆಯೇ ಹೊರತು ಜನರ ಅಪೇಕ್ಷೆಗಳು ಅದೊಂದರಿಂದಲೇ ಕಡಿಮೆಯಾಗುವುದಿಲ್ಲ. ಅದಲ್ಲದೆ ಹಣದುಬ್ಬರ ದೀರ್ಘಕಾಲ ಋಣಾತ್ಮಕವಾಗಿ ಮುಂದುವರಿದರೂ ಆರ್ಥಿಕ ಬೆಳವಣಿಗೆ ಕುಗ್ಗುತ್ತದೆ. ದೇಶಕ್ಕೆ ಆರ್ಥಿಕ ಬೆಳವಣಿಗೆಯೂ ಪ್ರಮುಖ. ಜತೆಯಲ್ಲಿ ದೇಶದ ಆರ್ಥಿಕ ಪ್ರಗತಿಯನ್ನು ಪೋಷಿಸಲು ಹಣದುಬ್ಬರದ ನಿಯಂತ್ರಣವೂ ಮುಖ್ಯ. ವೇತನ ಕಡಿತ, ವೆಚ್ಚ ಇಳಿಕೆಯ ತಂತ್ರಗಾರಿಕೆಗಳಿಂದ ಹಣದುಬ್ಬರವನ್ನು ನಿಯಂತ್ರಿಸಬಹುದಾದರೂ ಇದರಿಂದ ಉದ್ಯೋಗ ನಷ್ಟ, ಆರ್ಥಿಕ ಹಿಂಜರಿತದ ತೀವ್ರ ಪರಿಣಾಮಗಳು ಎದುರಾ ಗುತ್ತವೆ. ಈಗಿನ ಟ್ರೆಂಡ್‌ನ್ನು ಗಮನಿಸಿದರೆ 2021-22ರಲ್ಲಿ ಹಣದುಬ್ಬರ ಶೇ. 4.75 ರಿಂದ ಶೇ. 5.75ಕ್ಕೆ ಏರಿಕೆಯಾಗುವ ಸಂಭವವಿದೆ. ಕೊರೊನೋತ್ತರದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಹಣದುಬ್ಬರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದರಿಂದ ಹೂಡಿಕೆದಾರರ ವಿಶ್ವಾಸ ವೃದ್ಧಿಯಾಗುತ್ತದೆ. ಇದು ಇಂದಿನ ಆದ್ಯತೆ.
Related Articles
2020-21ರ ಆರ್ಥಿಕ ವರ್ಷದಲ್ಲಿ ಕೃಷಿ ಶೇ. 3.4 ಬೆಳವಣಿಗೆ ಕಂಡರೆ ಕೈಗಾರಿಕೆ ಶೇ. 9.6 ರಷ್ಟು ಮತ್ತು ಸೇವಾವಲಯ ಶೇ. 8.8ರಷ್ಟು ಕುಸಿತ ಕಂಡಿವೆ. 2020-21 ರ ಜಿಡಿಪಿಯು ಶೇ. 7.7 ರಷ್ಟು ಕುಸಿಯಲಿದೆ. ಕೊರೊನಾದಿಂದಾಗಿ ತತ್ತರಿಸಿದ ಆರ್ಥಿಕತೆ “ವಿ’ ಆಕಾರದ ಸ್ವರೂಪದಲ್ಲಿ ಚೇತರಿಸಿಕೊಳ್ಳುತ್ತಿದೆ. ಮೊದಲ ತ್ರೆçಮಾಸಿಕದ ದೇಶದ ಜಿಡಿಪಿ ಶೇ. (23.9) ಕುಸಿತ ಕಂಡರೂ ತದನಂತರದ ತ್ರೆçಮಾಸಿಕದಲ್ಲಿ ಶೇ. (-) 7.5 ಕ್ಕೆ ಕುಸಿಯಿತು. ಬೇಡಿಕೆ ಮತ್ತು ಪೂರೈಕೆಗಳೆರಡರಲ್ಲೂ ನಕಾರಾತ್ಮಕ ಬೆಳವಣಿಗೆ ಸೃಷ್ಟಿಯಾಗಿರುವುದೇ ಇದಕ್ಕೆ ಕಾರಣ. ಐಎಂಎಫ್ ವರದಿಯನ್ವಯ 2021-2022 ರಲ್ಲಿ ಜಗತ್ತಿನ ಅತ್ಯಂತ ತ್ವರಿತವಾಗಿ ಶೇ. 11.5 ರಷ್ಟು ಬೆಳವಣಿಗೆ ಸಾಧಿಸಲಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಹಾಗೂ ಸ್ವಾತಂತ್ರಾéನಂತರದ ಗರಿಷ್ಠ ಜಿಡಿಪಿ ಬೆಳವಣಿಗೆಯಾಗಿ ದಾಖಲೆಯಾಗಲಿದೆ ಎಂದು ಅಂದಾಜಿಸಲಾಗಿದೆ.
Advertisement
ಭಾರತದಲ್ಲಿ ಆರ್ಥಿಕ ಬೆಳವಣಿಗೆ ಅಸಮಾನತೆಗಿಂತ ಬಡತನ ನಿವಾರಣೆ ಮೇಲೆ ಹೆಚ್ಚು ಪರಿಣಾಮ ಬೀರಬೇಕು. ಆರ್ಥಿಕ ಸುಧಾರಣೆ ಎಂಬುದು ಹಣಕಾಸು ವಿಸ್ತರಣೆ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಲ್ಲಿ ಮರುಹಂಚಿಕೆ ಸಾಧ್ಯವಾದಾಗ ಮಾತ್ರ ಸಾಧ್ಯ. – ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ