Advertisement

Oil Import: ಭಾರತಕ್ಕೆ ತೈಲ ಆಮದು: ರಷ್ಯಾಗಿಂತ ಉತ್ತಮ ಒಪ್ಪಂದ ಇದ್ದರೆ ಹೇಳಿ: ಜೈಶಂಕರ್‌

05:16 AM Dec 09, 2024 | Team Udayavani |

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ಸಂಘರ್ಷದ ನಡುವೆಯೂ ಭಾರತ ರಷ್ಯಾದಿಂದ ಕಚ್ಛಾತೈಲ ಆಮದು ಮಾಡಿಕೊಳ್ಳುತ್ತಿರುವುದನ್ನು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸಮರ್ಥಿಸಿಕೊಂಡಿದ್ದಾರೆ.

Advertisement

ದೇಶ ಆಮದು ಮಾಡಿಕೊಳ್ಳುವ ಶೇ.355ರಷ್ಟು ಕಚ್ಚಾ ತೈಲವನ್ನು ಉತ್ತಮ ಮೌಲ್ಯದಲ್ಲಿ ರಷ್ಯಾ ಒದಗಿಸುತ್ತಿದ್ದು, “ವಿಶ್ವದ ಬೇರೆ ಯಾವುದೇ ದೇಶ ಇದಕ್ಕಿಂತ ಅಗ್ಗವಾಗಿಲ್ಲದಿದ್ದರೂ, ಉತ್ತಮವಾದ ಒಪ್ಪಂದ ಇದ್ದರೆ ಹೇಳಿ’ ಎಂದಿದ್ದಾರೆ.

ದೋಹಾದಲ್ಲಿ ನಡೆದ 22ನೇ ಫೋರಮ್‌ ಪ್ಯಾನೆಲ್‌ನಲ್ಲಿ ಮಾತನಾಡಿ, “ಯುದ್ದಭೂಮಿಯಲ್ಲಿ ಹೋರಾಡುವುದರಿಂದ ಈ ಸಂಘರ್ಷಗಳು ಪರಿಹಾರವಾಗುವುದಿಲ್ಲ, ಇವನ್ನು ತಡೆಗಟ್ಟಲು ಮಾತುಕತೆ ಅಗತ್ಯ ಎಂಬುದನ್ನು ವಿಶ್ವ ಈಗ ಅರಿತುಗೊಂಡಿದೆ. ಆ ನಿಟ್ಟಿನಲ್ಲಿ ಭಾರತವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಜೈಶಂಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next