Advertisement

Major League ಕ್ರಿಕೆಟ್‌ ಕೂಟಕ್ಕೆ ಅಧಿಕೃತ ಲಿಸ್ಟ್‌ ‘ಎ’ ಸ್ಥಾನಮಾನ

11:19 PM May 28, 2024 | Team Udayavani |

ದುಬಾೖ: ಅಮೆರಿಕದಲ್ಲಿ ನಡೆದ ಟಿ20 ಕೂಟವಾದ ಮೇಜರ್‌ ಲೀಗ್‌ ಕ್ರಿಕೆಟ್‌ (ಎಂಎಲ್‌ಸಿ)ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಅಧಿಕೃತ ಲಿಸ್ಟ್‌ “ಎ’ ಸ್ಥಾನಮಾನ ನೀಡಿದೆ. ಈ ಸ್ಥಾನಮಾನ ಪಡೆದ 2ನೇ ಅಸೋಸಿಯೇಟ್‌ ಸಂಘಟಿಸುತ್ತಿರುವ ಫ್ರಾಂಚೈಸ್‌ ಸ್ಪರ್ಧೆ ಇದಾಗಿದೆ. ಯುಎಇಯ ಐಎಲ್‌ಟಿ20ಗೆ ಲಿಸ್ಟ್‌ “ಎ’ ಸ್ಥಾನಮಾನ ಲಭಿಸಿತ್ತು.

Advertisement

ಈ ಸ್ಥಾನಮಾನದಿಂದಾಗಿ ಎಂಎಲ್‌ಸಿಯು ಇನ್ನು ಮುಂದೆ ಅದಿಕೃತಟಿ20 ಲೀಗ್‌ ಎಂದು ಗುರುತಿಸಲಾಗುತ್ತದೆ. ಈ ಕೂಟದ ವೇಳೆ ದಾಖಲಾಗುವ ದಾಖಲೆಗಳನ್ನು ಅದಿಕೃತ ಅಂಕಿ ಅಂಶಗಳಾಗಿ ಪರಿಗಣಿಸಲಾಗುತ್ತದೆ. ಐಸಿಸಿ ನೀಡಿದ ಈ ಸ್ಥಾನಮಾನದಿಂದಾಗಿ ನಾವು ನಿಜವಾಗಿಯೂ ರೋಮಾಂಚನ ಗೊಂಡಿದ್ದೇವೆ ಎಂದು ಕೂಟದ ನಿರ್ದೇಶಕ ಜಸ್ಟಿನ್‌ ಗೀಲೆ ಹೇಳಿದ್ದಾರೆ.

2024ರ ಎಂಎಲ್‌ಸಿ ಋತು ಜುಲೈ 5ರಿಂದ ಆರಂಭವಾಗಲಿದೆ. ಎಂಎಲ್‌ಸಿಯ ಆರು ತಂಡಗಳಲ್ಲಿ ನಾಲ್ಕು ತಂಡಗಳನ್ನು ಐಪಿಎಲ್‌ ತಂಡಗಳೇ (ಮುಂಬೈ, ಕೆಕೆಆರ್‌, ಚೆನ್ನೈ, ಡೆಲ್ಲಿ) ಖರೀದಿಸಿದ್ದವು. ಮೊದಲ ಋತುವಿನಲ್ಲಿ 15 ಬಣ ಹಂತದ ಪಂದ್ಯಗಳು ನಡೆದಿದ್ದವು. ಆಬಳಿಕ ನಾಲ್ಕು ಪ್ಲೇ ಆಫ್ ಪಂದ್ಯಗಳು ನಡೆದಿದ್ದು ಮುಂಬೈ ಇಂಡಿಯನ್ಸ್‌ ನ್ಯೂಯಾರ್ಕ್‌ ಪ್ರಶಸ್ತಿ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next