Advertisement

ಕುಣಿಗಲ್: ಬಾಲ್ಯ ವಿವಾಹವನ್ನು ತಡೆದ ಅಧಿಕಾರಿಗಳು

01:07 PM Jun 21, 2022 | Team Udayavani |

ಕುಣಿಗಲ್: ತುಮಕೂರು ತಾಲೂಕು ಹೆಬ್ಬೂರು ಹೋಬಳಿ ದೊಡ್ಡಯ್ಯನಕಟ್ಟೆ ಪಾಳ್ಯದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು  ಕಾರ್ಯಚರಣೆ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹೆಬ್ಬೂರು ಹೋಬಳಿ ರಾಜಾಪುರ ಗ್ರಾಮದ ಯುವಕ ಕುಣಿಗಲ್ ಪಟ್ಟಣದ ವಾರ್ಡ್ ನಂ 1 ಬಿದನಗೆರೆ ಗ್ರಾಮದ ಯುವತಿಯೊಂದಿಗೆ ನಿಶ್ಚಿತವಾಗಿದ್ದ.

ತಾಲೂಕಿನ ಹೆಬ್ಬೂರು ಹೋಬಳಿ  ದೊಡ್ಡಯ್ಯನಕಟ್ಟೆ ಪಾಳ್ಯ ಗ್ರಾಮದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪ್ರಥಮ ಶಾಸ್ತ್ರ ಹಾಗೂ  ಬುಧವಾರ ಮುಹೂರ್ತ ಇಟ್ಟುಕೊಳ್ಳಲಾಗಿತ್ತು, ಯುವತಿಗೆ 17 ವರ್ಷ 2 ತಿಂಗಳಾಗಿದ್ದು ಯುವತಿಗೆ 18 ವರ್ಷ ತುಂಬದ ಹಿನ್ನೆಲೆಯಲ್ಲಿ ಬಾಲ್ಯ ವಿವಾಹವಾಗಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.

ನೀಡಿದ ದೂರಿನ ಅನ್ವಯ ಸಿಡಿಪಿಓ ಅನುಷಾ, ಪಿಎಸ್ಐ ಲಕ್ಷ್ಮಣ್ , ಬಾಲ್ಯ ವಿವಾಹವಾದರೆ ಕಾನೂನು ಪ್ರಕಾರ ಕಠಿಣ ಕ್ರಮಕ್ಕೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅಧಿಕಾರಿಗಳು, ಬಳಿಕ ವಧು ಹಾಗೂ ವರನ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ವಿವಾಹವನ್ನು ತಡೆದರು.

Advertisement

Udayavani is now on Telegram. Click here to join our channel and stay updated with the latest news.

Next