Advertisement

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

07:50 PM Jan 24, 2022 | Team Udayavani |

ಕಿನ್ನಿಗೋಳಿ : ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆದಿದೆ.

Advertisement

ಪಟ್ಟೆಯ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ ನೂರಾರು ಲೋಡ್ ಮರಳು ತೆಗೆಯುತ್ತಿದ್ದು, ಈ ಬಗ್ಗೆ ಈ ಹಿಂದೆಯೂ ದೂರುಗಳು ಕೇಳಿ ಬಂದಿತ್ತು. ಕಳೆದ ಕೆಲ ದಿನಗಳ ಹಿಂದೆ ಮರಳು ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ, ಅಲ್ಲದೆ ಪೆರ್ಗುಂಡಿ ಸಾರ್ವಜನಿಕ ಗಣೇಶೋತ್ಸವದ ಮಂಟಪದಲ್ಲಿ ಕಾಣಿಕೆ ಡಬ್ಬಿ ಕಳವಾಗಿತ್ತು, ಲಾರಿ ಹಗಲು ಹೊತ್ತು ಓಡಾಟದ ಕಾರಣ ಸ್ಥಳೀಯರಿಗೆ ಸಮಸ್ಯೆ ಆಗಿದ್ದು, ಈ ಬಗ್ಗೆ ಗಣಿ ಮಾಲಿಕರಿಗೆ ಗ್ರಾಮಸ್ಥರು ಹಗಲು ಹೊತ್ತು ಮರಳು ತೆಗೆಯದಂತೆ ವಿನಂತಿಸಿದ್ದರು, ಇವರ ವಿನಂತಿಗೆ ತಲೆಕೆಡಿಸಿಕೊಳ್ಳದ ಗಣಿ ಮಾಲಿಕರು ರಾಜಾರೋಷವಾಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು. ಈ ಬಗ್ಗೆ ಗ್ರಾಮಸ್ಥರು ಇಂದು ಮಂಗಳೂರು ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಮತ್ತು ಗಣಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರ ಪರಿಣಾಮ ಸ್ಥಳಕ್ಕೆ ಗಣಿ ಅಧಿಕಾರಿ ಪದ್ಮಶ್ರೀ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಸಂದರ್ಭ ನದಿಯಲ್ಲಿ ಮೂರು ದೋಣಿಗಳು ಸಿಕ್ಜಿದ್ದು ಅದನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮಸ್ಥರೇ ದೋಣಿಗಳನ್ನು ದಡಕ್ಕೆ ತರಲು ಸಹಕರಿಸಿದ್ದು, ಸುಮಾರು 20 ದೋಣಿಗಳಲ್ಲಿ ಮರಳು ತೆಗೆಯುತ್ತಿದ್ದು ಬೇರೆ ದೋಣಿಗಳನ್ನು ಪೂರ್ವ ಮಾಹಿತಿ ಪಡೆದ ಗಣಿ ಮಾಲಿಕರು ತಪ್ಪಿಸಿ ಇಟ್ಟಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ : ಗಂಗೊಳ್ಳಿ: ಮೀನುಗಾರಿಕಾ ಬಂದರು ಜೆಟ್ಟಿ ಪುನರ್‌ ನಿರ್ಮಾಣ ಸ್ಥಗಿತ

ನದಿ ದಡದಲ್ಲಿ ಮರಳು ಕಾರ್ಮಿಕರಿಗೆ ಉಳಿದುಕೊಳ್ಳಲು ಎರಡು ಟರ್ಪಾಲಿನ ಶೆಡ್ ಗಳನ್ನು ನಿರ್ಮಿಸಿದ್ದು ಅದನ್ನು ಗ್ರಾಮಸ್ಥರು ಧ್ವಂಸ‌ಮಾಡಿದ್ದಾರೆ. ಸ್ಥಳಕ್ಕೆ ಗಣಿ ಅಧಿಕಾರಿ ಪದ್ಮಶ್ರೀ, ಮೂಲ್ಕಿ ತಹಶೀಲ್ದಾರ್ ಕಮಲಮ್ಮ, ಐಕಳ ಗ್ರಾಮಕರಣಿಕ ವಿಜೇತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next