ರೈತರು ರಾಗಿ ಮಾರಾಟ ಮಾಡಲು ಪರದಾಡುವಂತಾಗಿದ್ದು, ರೈತರ ಹಿಡಿಶಾಪಕ್ಕೆ ಅಧಿಕಾರಿಗಳು ಗುರಿಯಾದ ಘಟನೆ ಕೆಂಪಲಿಂಗನಹಳ್ಳಿ ಬಳಿಯ ರಾಗಿ ಖರೀದಿ
ಕೇಂದ್ರದ ಬಳಿಯಲ್ಲಿ ಸಂಭವಿಸಿದೆ.
Advertisement
ತಾಲೂಕಿನ ಕಳೆದ ಎರೆಡು ದಿನ ರೈತರು ತಮ್ಮ ರಾಗಿಯನ್ನು ರಾಗೀ ಖರೀದಿ ಕೇಂದ್ರಕ್ಕೆ ಮಾರಾಟಕ್ಕೆಂದು ತಂದು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನವಾದರೂ ರಾಗಿ ಖರೀದಿ ಕೇಂದ್ರದ ಚಟುವಟಿಕೆ ಪ್ರಾರಂಭವಾಗದ ಹಿನ್ನೆಲೆ ಕಾಯ್ದು ಕಾಯ್ದು ಕೋಪಗೊಂಡಿದ್ದ ರೈತರು ಅಧಿಕಾರಿಗಳುನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ರಾಗಿ ಸಾಗಣೆ ಮಾಡಲು ಲಾರಿಗಳನ್ನು ಕಳುಹಿಸಿಲ್ಲ ಎಂದು ಸಬೂಬು ಹೇಳಿದ್ದಾರೆ. ಅಧಿಕಾರಿಗಳ ಉತ್ತರದಿಂದ ಆಕ್ರೋಶಗೊಂಡ ರೈತರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗದುಕೊಳ್ಳುತಿದ್ದಂತೆ ಅಧಿಕಾರಿಗಳು ತಮ್ಮ ಕಾಲಿಗೆ ಬುದ್ಧಿ ಹೇಳಿದ್ದಾರೆ. ರೈತರ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಆಗ್ರಹಿಸಿದ್ದಾರೆ.
Related Articles
Advertisement
ಹೋರಾಟದ ಎಚ್ಚರಿಕೆಆಡಳಿತ ನಡೆಸುವವರು ಮೈಮರೆತು ಕುಳಿತಂತಿದೆ. ರೈತರ ಕಷ್ಟವನ್ನು ಬಗೆಹರಿಸುತ್ತೇವೆಂದು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವವರು ತಮ್ಮ ಸ್ವಂತ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸಲು ಸ್ಥಳೀಯ ತಾಲೂಕು ಆಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್ ಎಚ್ಚರಿಕೆಯನ್ನು ನೀಡಿದರು.