Advertisement
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಆನವಟ್ಟಿ, ಉಳವಿ, ತಲಗಡ್ಡೆ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳು ಶಿಥಿಲಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೆ ಅವುಗಳನ್ನು ತೆರವುಗೊಳಿಸಿ ಹೊಸದಾಗಿ ಟ್ಯಾಂಕ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕುಸಿದು ಬೀಳುವ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳು, ಶಾಲಾ ಕಟ್ಟಡಗಳನ್ನು ಆನಾಹುತಗಳು ಸಂಭವಿಸುವ ಮೊದಲು ಕೋರಿಕೆಯ ಮೇರೆಗೆ ತೆರವುಗೊಳಿಸಲು ಸಂಬಂಧಿ ಸಿದವರಿಗೆ ಕೂಡಲೇ ವರದಿ ನೀಡುವಂತೆ ಅಧಿ ಕಾರಿಗಳಿಗೆ ಸೂಚಿಸಿದರು.
ರಸ್ತೆಗಳು ಅತಿಕ್ರಮಗೊಂಡರೂ ಅಧಿಕಾರಿಗಳು ತೆರವುಗೊಳಿಸುವಲ್ಲಿ ಮುಂದಾಗುತ್ತಿಲ್ಲ. ಸರ್ಕಾರದ ಆಶಯಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸದಿರುವ ಅಧಿಕಾರಿಗಳ ಅವಶ್ಯಕತೆ ತಾಲೂಕಿಗೆ ಬೇಕಾಗಿಲ್ಲ. ಕೂಡಲೇ ಅಂತಹ ಅಧಿ ಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಮುಂದಾಗಬೇಕೆಂದು ನಾಮ ನಿರ್ದೇಶಿತ ಕೆಡಿಪಿ ಸದಸ್ಯ ಪರಸಪ್ಪ ಚಿಕ್ಕಶಕುನ ಸಭೆಯಲ್ಲಿ ಶಾಸಕರ ಗಮನ ಸೆಳೆದರು.
Related Articles
ಪೂರಕವಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಪ್ರಗತಿಗೆ ಮುಂದಾಗಬೇಕೆಂದು ಸೂಚಿಸಿದರು. ಮೆಸ್ಕಾಂ ಎಂಜನಿಯರ್ ನವೀನ ಕುಮಾರ್ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 3200 ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗೆ ಇಲಾಖೆಯಿಂದ ಸೋಲಾರ್ ಗ್ರಿಡ್ ಅಳವಡಿಸಲಾಗುತ್ತಿದ್ದು, ಇದರಿಂದ ಪ್ರತಿ ತಿಂಗಳು ರೂ 8ಸಾವಿರ ಹಣ ಉಳಿತಾಯವಾಗಲಿದೆ. ನಿರಂತರ ಜ್ಯೋತಿ ಯೋಜನೆಯಡಿ ಶೀಘ್ರದಲ್ಲೇ ತಾಲೂಕಿಗೆ 24 ತಾಸು ವಿದ್ಯುತ್ ನೀಡಲಾಗುವುದು ಎಂದರು.
Advertisement
ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಕೊರತೆ, ಕೃಷಿ ಇಲಾಖೆ, ಶಿಕ್ಷಣ, ಸಮಾಜ ಕಲ್ಯಾಣ, ರೇಷ್ಮೆ, ಇನ್ನೂ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಪ್ರಗತಿಯ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಉಪಾಧ್ಯಕ್ಷ ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕಶ್ರೀಪಾದ ಹೆಗಡೆ ನಿಸರಾಣಿ, ಜಿಪಂ ಸದಸ್ಯರಾದ ಸತೀಶ್ ಅರ್ಜುನಪ್ಪ, ಶಿವಲಿಂಗ ಗೌಡ್ರು, ರಾಜೇಶ್ವರಿ, ತಾರಾ ಶಿವಾನಂದಪ್ಪ, ವೀರೇಶ್ ಕೊಟಗಿ, ಇಒ ಮಂಜುಳಾ, ಜಿಪಂ ಎಂಜಿನಿಯರ್ ನಂಜುಂಡಪ್ಪ, ತೋಟಗಾರಿಕಾ ಅಧಿಕಾರಿ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ನಾಮನಿರ್ದೇಶಿತ ಸದಸ್ಯರು ಇದ್ದರು.