Advertisement

“ಯುಪಿಎಸ್‌ಸಿ ಅಧಿಕಾರಿಗಳು ಬಹುತೇಕ ಡಕಾಯಿತರು’! Union Minister Bisheswar Tudu

10:29 PM Apr 10, 2023 | Team Udayavani |

ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗ(ಯುಪಿಎಸ್‌ಸಿ)ದ ವತಿಯಿಂದ ಸರ್ಕಾರಿ ಹುದ್ದೆಗಳಿಗೆ ನೇಮಕಗೊಳ್ಳುವ ಬಹುತೇಕ ಅಧಿಕಾರಿಗಳು “ಡಕಾಯಿತರು’ ಎಂದು ಹೇಳುವ ಮೂಲಕ ಬಿಜೆಪಿ ನಾಯಕ, ಕೇಂದ್ರ ಸಚಿವ ಬಿಶ್ವೇಶ್ವರ ಟುಡು ವಿವಾದ ಸೃಷ್ಟಿಸಿದ್ದಾರೆ.

Advertisement

ಕೇಂದ್ರ ಬುಡಕಟ್ಟು ಹಾಗೂ ಜಲಕಶಕ್ತಿ ಖಾತೆ ಸಹಾಯಕ ಸಚಿವರಾದ ಟುಡು, ಒಡಿಶಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಯುಪಿಎಸ್‌ಸಿ ಮೂಲಕ ನೇಮಕಗೊಳ್ಳುವವರು ಭಾರೀ ಬುದ್ಧಿವಂತರು ಮತ್ತು ಸದಾ ಉನ್ನತ ಸ್ಥಾನದಲ್ಲಿರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ನನಗೆ ಈಗ ಅರ್ಥವಾಗುತ್ತಿದೆ. ಅವರಲ್ಲಿ ಬಹುತೇಕರು ಡಕಾಯಿತರಾಗಿರುತ್ತಾರೆ. ಎಲ್ಲರೂ ಡಕಾಯಿತರೆಂದು ಹೇಳುತ್ತಿಲ್ಲ, ಆದರೆ ಬಹುತೇಕರು ಅಂಥವರೇ. ಚಿಕನ್‌ ಕದಿಯುವ ಒಬ್ಬ ವ್ಯಕ್ತಿಗೆ ಶಿಕ್ಷೆಯಾಗುತ್ತದೆ. ಆದರೆ, ಮಿನರಲ್‌ ಮಾಫಿಯಾ ನಡೆಸುವ ಅಧಿಕಾರಿಯನ್ನು ಶಿಕ್ಷೆ ಇರಲಿ, ಮುಟ್ಟಲೂ ಸಾಧ್ಯವಾಗುವುದಿಲ್ಲ. ಆ ರೀತಿ ವ್ಯವಸ್ಥೆ ಅವರನ್ನು ರಕ್ಷಿಸುತ್ತಿರುತ್ತದೆ. ವಿದ್ಯಾವಂತರಿದ್ದರೂ ನಮ್ಮ ದೇಶದಲ್ಲಿ ಭ್ರಷ್ಟಾಚಾರವಿರಲು ಇದೇ ಕಾರಣ. ನಮಗೆ ಅಧ್ಯಾತ್ಮಿಕ ಶಿಕ್ಷಣ ಮತ್ತು ಆಲೋಚನೆಗಳ ಕೊರತೆ ಇದೆ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next