Advertisement

ಅಧಿಕಾರಿ ಸುಖ ನಿದ್ರೆ, ಸ್ವಾಮೀಜಿ ದರ್ಶನ !

03:06 PM Nov 11, 2018 | |

ಆಲಮಟ್ಟಿ: ಶನಿವಾರ ಇಲ್ಲಿಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಭವನದಲ್ಲಿ ನಡೆದ ಯುಕೆಪಿ ನೀರಾವರಿ ಸಲಹಾ ಸಮಿತಿ ಸಭೆ ಹಲವಾರು ವಿಶೇಷತೆಗಳಿಗೆ ಕಾರಣವಾಯಿತು.

Advertisement

ಭಾಳ ಶ್ಯಾಣೆ ಆಗ್ಬೇಡ: ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ, 2015-16ನೇ ಸಾಲಿನಲ್ಲಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗದಿರುವುದರಿಂದ ಜಲಾಶಯ ಸಂಪೂರ್ಣ ತುಂಬದೇ ಇರುವುದರಿಂದ ಜಲಚರಗಳ ಸಾವಿಗೆ ಕಾರಣವಾಗಿತ್ತು. ಆದರೆ ಈ ಬಾರಿ ಜಲಾನಯನ ಪ್ರದೇಶದಲ್ಲಿ ಮಳೆಯಾದ ಪರಿಣಾಮ ಆಲಮಟ್ಟಿ ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹವಾಗಿತ್ತು. 

ಕಳೆದ ವರ್ಷ ಇದೇ ದಿನ 119 ಟಿಎಂಸಿ ನೀರು ಸಂಗ್ರಹವಾಗಿತ್ತು, ಆದರೆ ಈಗ ನವೆಂಬರ್‌ ತಿಂಗಳಲ್ಲಿಯೇ ಜಲಾಶಯದಲ್ಲಿ ವ್ಯಾಪಕವಾಗಿ ನೀರು ಕುಸಿದಿದೆ.

ಇದರಿಂದ ನಾರಾಯಣಪುರ ಜಲಾಶಯಕ್ಕೆ ವಾಡಿಕೆಗಿಂತಲೂ ಹೆಚ್ಚು ನೀರು ಬಿಡಲು ಅಧಿಕಾರಿಗೆ ಸರ್ಕಾರ ಆದೇಶ ನೀಡಿದೆಯೋ? ಜಲ ಸಂಪನ್ಮೂಲ ಸಚಿವರು ತಿಳಿಸಿದರೋ? ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷರು ಆದೇಶಿಸಿದರೋ? ಅಥವಾ ಆ ಅಧಿಕಾರಿಗಳು ಸ್ವ ಘೋಷಿತ ಕಾನೂನು ರಚನೆ ಮಾಡಿದ್ದಾರೋ ಹೇಗೆ ಎಂದು ಪ್ರಶ್ನಿಸಿ ನೀರು ಬಿಡಲು ಕಾರಣರಾಗಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪದೇ ಪದೇ ಒತ್ತಾಯಿಸಿದರು.

ಇದರಿಂದ ಆಕ್ರೋಶಗೊಂಡ ತಮ್ಮದೇ ಪಕ್ಷದ ರಾಜುಗೌಡ ನಾಯಕ ಅವರು ನಡಹಳ್ಳಿಯವರವನ್ನುದ್ದೇಶಿಸಿ ಏನೀ ಭಾಳ
ಶಾಣ್ಯಾ ಆಗ್ಬೇಡ ಎಂದು ಏಕ ವಚನದಲ್ಲಿ ಹೇಳಿದ ಪ್ರಸಂಗ ನಡೆಯಿತು.

Advertisement

 ಜಲ ಸಂಪನ್ಮೂಲ ಸಚಿವರಿಂದ ಏನೂ ಆಗೂದಿಲ್ಲ: ಸಭೆಯಲ್ಲಿ ಪಕ್ಷಾತೀತವಾಗಿ ಶಾಸಕರುಗಳು ತಮ್ಮ ಕ್ಷೇತ್ರಗಳಲ್ಲಾಗುತ್ತಿರುವ ನೀರು ನಿರ್ವಹಣೆ, ಸಿಬ್ಬಂದಿ, ಅಧಿಕಾರಿಗಳ ಕೊರತೆ ಹೀಗೆ ಸಾಲು ಸಾಲಾಗಿ ಪ್ರಶ್ನೆಗಳ
ಸುರಿಮಳೆಗೈದರು. ಇದರಿಂದ ಮಧ್ಯಪ್ರವೇಶಿಸಿದ ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಅವರು ಇದಾವುದೂ ನಮ್ಮ ಸಚಿವರಿಂದ ಆಗುದಿಲ್ಲ ಎಂದು ಹೇಳಿದರು.

ಸಚಿವ ಶಿವಾನಂದ ಪಾಟೀಲ ಅವರು ಸಭೆಯು ನೀರಿನ ಬಳಕೆ ಬಗ್ಗೆ ಮಾತ್ರವಿದ್ದು ಕಾಲುವೆಗಳ ಹಾಗೂ ಅಧಿಕಾರಿ ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ಜಲ ಸಂಪನ್ಮೂಲ ಸಚಿವರ ಗಮನಕ್ಕೆ ತರಲಾಗಿದೆ. ಅವರ ನೇತೃತ್ವದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಶಾಸಕ, ಸಂಸದರನ್ನೊಳಗೊಂಡ ಸಭೆ ನಡೆಸಲು ಈಗಾಗಲೇ ಸಚಿವರಿಗೆ ಪತ್ರ ಬರೆದಿದ್ದೇನೆ ಮತ್ತು ಇನ್ನೊಮ್ಮೆ ಅವರೊಂದಿಗೆ ಮಾತನಾಡಿ ಸಭೆ ನಡೆಸಲು ದಿನಾಂಕ ನಿಗದಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರೈತರ ಅಭಿಪ್ರಾಯ: ಹಿಂಗಾರು ಹಂಗಾಮಿಗೆ ರೈತರ ಜಮೀನುಗಳಿಗೆ ನೀರುಣಿಸಲು ನಡೆದ ಸಲಹಾ ಸಮಿತಿ ಸಭೆಯ ಆರಂಭಕ್ಕೂ ಮುಂಚೆ ವಿಜಯಪುರ ಹಾಗೂ ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತ ಮುಖಂಡರು ಹಿಂಗಾರು ಹಾಂಗಾಮಿಗೆ ನೀರು ಕೊಡಲೇಬೇಕು ಎಂದು ಕಚೇರಿ ಎದುರಿನಲ್ಲಿ ಹೋರಾಟ ಆರಂಭಿಸಿದ್ದರು.
 
ಇದನ್ನರಿತ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ಪೊಲೀಸ್‌ ಅಧಿಕಾರಿಗಳಿಗೆ ಕರೆದು ರೈತ ಮುಖಂಡರನ್ನು ಸಭೆಗೆ ಕರೆದುಕೊಂಡು ಬರುವಂತೆ ತಿಳಿಸಿದರು.

ಸಭೆಗೆ ಆಗಮಿಸಿದ್ದ ರೈತ ಮುಖಂಡರನ್ನು ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಕೋರಿದ್ದರಿಂದ ರೈತ ಮುಖಂಡರುಗಳಾದ ಬಸವರಾಜ ಕುಂಬಾರ, ವೆಂಕಟೇಶ ಹಳ್ಳೂರ, ವೈ.ಎಲ್‌. ಬಿರಾದಾರ ಮಾತನಾಡಿ, ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳ ನಿರ್ಮಾಣಕ್ಕೆ ಈ ಭಾಗದ ಜನರು ಆಸ್ತಿ ಕಳೆದುಕೊಂಡಿರುವುದಲ್ಲದೇ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಆದ್ದರಿಂದ ಎ ಸ್ಕೀಂ ಹಾಗೂ ಬಿಸ್ಕೀಂ ಎಂದು ವಿಂಗಡಿಸದೇ
ನಿರ್ಮಾಣಗೊಂಡಿರುವ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು. ಅವಳಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು. ಸಮರ್ಪಕವಾಗಿ ನೀರು ನಿರ್ವಹಣೆ ಮಾಡದಿರುವುದರಿಂದ ಕೆಲ ರೈತರ ಜಮೀನಿಗೆ ನೀರು ತಲುಪುತ್ತಿಲ್ಲ, ಇನ್ನು ಕೆಲ ರೈತರ ಜಮೀನಿನಲ್ಲಿ ಹೆಚ್ಚು ನೀರು ಹರಿದು ಸವುಳು-ಜವುಳಿಗೆ ಕಾರಣವಾಗುತ್ತಿದೆ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಸುಖ ನಿದ್ರೆ ಮಹತ್ವದ ನೀರಾವರಿ ಸಭೆಗೆ ಆಗಮಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರಲ್ಲಿ ಸಭೆಯುದ್ದಕ್ಕೂ ಗದ್ದಲ, ಅಧಿಕಾರಿಗಳ ತರಾಟೆ ನಡೆಯುತ್ತಿದ್ದರೆ ಇಬ್ಬರು ಸಕಾರಿಗಳು ಮಾತ್ರ ಸಭೆಗೂ ತಮಗೂ ಸಂಬಂಧವೇ ಇಲ್ಲದಂತೆ ನಿದ್ರೆಗೆ ಜಾರಿದ್ದು ಕಂಡು ಬಂತು.

ಸಭೆಗೆ ಆಗಮಿಸಿದ ಸ್ವಾಮೀಜಿ ಕಳೆದ 16 ವರ್ಷಗಳಿಂದ ನಡೆಯುತ್ತಿರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ
ಇಲ್ಲಿವರೆಗೂ ಯಾವ ಸ್ವಾಮೀಜಿಗಳು ಭಾಗವಹಿಸಿರಲಿಲ್ಲ. ಆದರೆ ಈ ಬಾರಿ ಇಟಗಿಯ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿಯವರು ಸಭೆಯುದ್ದಕ್ಕೂ ಕುಳಿತು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next