Advertisement

ಹೊಯ್ದಾಡುವ ಮನಸ್ಸು ಮತ್ತು ಪವಿತ್ರ ಘಂಟಾನಾದ

12:01 AM Dec 26, 2020 | mahesh |

ಇದು ಓಶೋ ರಜನೀಶ್‌ ಹೇಳಿದ ಒಂದು ಸುಂದರವಾದ ಕಥೆ. ಓಶೋ ಒಂದೊಮ್ಮೆ ಒಂದು ಕಥೆ ಕೇಳಿ ದ್ದರಂತೆ. ಸಾವಿರಾರು ವರ್ಷಗಳ ಹಿಂದೆ ದೇಗುಲಗಳ ಪಟ್ಟಣವೊಂದು ಸಮುದ್ರದಲ್ಲಿ ಮುಳುಗಿಹೋದ ಕಥೆಯದು. ಆ ಪಟ್ಟಣ ವಿಡೀ ನೂರಾರು ದೇವಸ್ಥಾನಗಳಿದ್ದವು. ಅಂಥ ಪವಿತ್ರ ಪಟ್ಟಣ ಕಾಲಾಂತರದಲ್ಲಿ ಸಮುದ್ರ ಗರ್ಭ ಸೇರಿಹೋಗಿತ್ತು. ಆ ದೇಗುಲಗಳಲ್ಲಿರುವ ಘಂಟೆಗಳು ಈಗಲೂ ಬಾರಿಸಿ ಕೊಳ್ಳುತ್ತಿವೆಯಂತೆ. ಇರಬಹುದು, ಸಮುದ್ರದ ಆಳದಲ್ಲಿ ನೀರಿನ ಹೊಯ್ದಾಟ ದಿಂದಾಗಿ ಅವು ಬಾರಿಸಿಕೊಳ್ಳುತ್ತಿರಬಹುದು ಅಥವಾ ಮೀನುಗಳು ಅತ್ತಿಂದಿತ್ತ ಚಲಿಸು ವಾಗ ತಾಡಿಸಿಕೊಳ್ಳುತ್ತಿರಬಹುದು. ಅದೇನೇ ಆಗಿರಲಿ; ಆ ಘಂಟೆಗಳಿಂದ ಈಗಲೂ ನಾದ ಹೊರಡು ತ್ತಿದೆ ಮತ್ತು ಆ ಸಮುದ್ರ ತೀರದಲ್ಲಿ ಅದನ್ನು ಈಗಲೂ ಕೇಳಿಸಿಕೊಳ್ಳಬಹುದು.

Advertisement

ಓಶೋ ಕೂಡ ಅಂತಹ ಒಂದು ಸಮುದ್ರ ತೀರ ಎಲ್ಲಿದೆ ಎಂಬುದನ್ನು ಹುಡು ಕಾಡಿದರು. ಅವರಿಗೂ ಆ ಸುನಾದವನ್ನು ಕೇಳಿಸಿಕೊಳ್ಳುವ ಬಯಕೆ ಹುಟ್ಟಿತ್ತು. ಹಲವು ವರ್ಷಗಳ ಹುಡುಕಾಟದ ಬಳಿಕ ಅದರ ಪತ್ತೆಯಾಯಿತು. ಕಾತರದಿಂದ ಅಲ್ಲಿಗೆ ಹೋದರೆ ಅಲೆಗಳು ಕಲ್ಲುಗಳಿಗೆ, ಮರಳ ದಂಡೆಗೆ ಬಡಿಯುವ ಸದ್ದಿನ ವಿನಾ ಅವರಿಗೆ ಇನ್ನೇನೂ ಕೇಳಿಸಲಿಲ್ಲ. ಕಿನಾರೆಯ ಮರಳಿಗೆ ಕಿವಿಯಾನಿಸಿ ಕೇಳಿದರೂ ಘಂಟೆಗಳ ತಾಡನದ ಸದ್ದು ಸಿಗಲಿಲ್ಲ. ಆ ಕಡಲ ದಂಡೆ ಯಲ್ಲಿ ಅಲೆಗಳು ಹೊರಳಿ ಮರಳುವ ಏಕ ತಾನವನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ. ಸಂಗೀತವೂ ಇಲ್ಲ, ಘಂಟೆಗಳ ನಾದವೂ ಇಲ್ಲ. ಅಲೆಗಳು ಅಪ್ಪಳಿಸುವ ಸದ್ದು ಮಾತ್ರ.

ಆದರೂ ಓಶೋ ಅಲ್ಲೇ ಕಾದು ಕುಳಿತರು. ನಿಜ ಹೇಳಬೇಕೆಂದರೆ ಸಮುದ್ರಾಂತರ್ಗತ ದೇಗುಲಗಳ ಘಂಟಾನಾದವನ್ನು ಕೇಳುವ ಕಾತರ, ಹುಡುಕಾಟದ ನಡುವೆ ಅವರಿಗೆ ಬಂದ ದಾರಿಯೇ ಮರೆತುಹೋಗಿತ್ತು. ಈಗ ಯಾರಿಗೂ ತಿಳಿಯದ ಆ ಬಹುದೂರದ ಸಮುದ್ರ ತೀರವೇ ಅವರಿಗೆ ನೆಲೆ ಎಂಬಂತಾಗಿತ್ತು. ದಿನಗಳು ಉರುಳಿದವು. ಘಂಟೆಗಳ ಸದ್ದನ್ನು ಕೇಳುವ ಹಂಬಲ ನಿಧಾನ ವಾಗಿ ಮಾಯವಾಯಿತು. ಅವರು ಸಮುದ್ರ ಕಿನಾರೆಯಲ್ಲಿಯೇ ಶಾಶ್ವತವಾಗಿ ನೆಲೆಸಿದರು.

ಎಷ್ಟೋ ಕಾಲದ ಬಳಿಕ ಹಠಾತ್ತನೆ ಒಂದಿರುಳು ಅವರಿಗೆ ಆ ಘಂಟೆಗಳ ಸದ್ದು ಕಿವಿಗೆ ಬಿತ್ತು. ಆ ಸಿಹಿಯಾದ ಸುನಾದ ಅವರ ಕಿವಿದುಂಬಿತು. ಆ ನಾದ ಆವರಿಸುತ್ತಿದ್ದಂತೆ ನಿದ್ದೆ ಹರಿದು ಎಚ್ಚರವಾಯಿತು. ಆ ಬಳಿಕ ನಿದ್ದೆ ಅವರ ಬಳಿಗೆ ಎಂದೂ ಸುಳಿಯಲೇ ಇಲ್ಲ. ಒಳಗೆ ಸದಾ ಕಾಲ ಯಾರೋ ಸದಾ ಕಾಲ ಜಾಗೃತ ಸ್ಥಿತಿಯಲ್ಲಿರುವಂತೆ. ನಿದ್ದೆ ಶಾಶ್ವತವಾಗಿ ದೂರ ವಾಗಿತ್ತು. ಹಾಗಾಗಿ ಸದಾ ಬೆಳ್ಳಂಬೆಳಕು. ನಿದ್ದೆ ಇಲ್ಲ ಅಂದರೆ ಕಣ್ಣುಗಳು ಮುಚ್ಚು ವುದಿಲ್ಲ, ಅಂದರೆ ಕತ್ತಲೆ ಯಿಲ್ಲ; ಸದಾ ಬೆಳಕು.

ಸದಾಕಾಲ ದೇವಸ್ಥಾನಗಳ ಘಂಟೆಗಳ ಸುನಾದದ ಅಲೆಗಳು ಕಿವಿಯೊಳಗೆ ಅನುರಣಿ ಸುತ್ತಿರುವಾಗ ಸದಾ ಸಂತೋಷವೇ ಅಲ್ಲದೆ ಇನ್ನೇನು ಇರಲು ಸಾಧ್ಯ!

Advertisement

ಓಶೋ ಕೇಳುತ್ತಾರೆ, “ನಿಮಗೂ ಆ ಘಂಟಾನಾದ ಕೇಳಿಬರುವ ಸಮುದ್ರ ತಡಿಗೆ ಹೋಗಬೇಕು, ಆ ನಾದವನ್ನು ಕಿವಿಯಲ್ಲಿ ತುಂಬಿಸಿಕೊಳ್ಳಬೇಕು ಎಂಬ ಹಂಬಲ ಇದೆಯೇ? ಹಾಗಾದರೆ ಹೋಗೋಣ. ನಾವು ನಮ್ಮೊಳಗೇನೇ ಹೋಗೋಣ. ನಮ್ಮೆಲ್ಲರ ಹೃದಯಗಳೇ ಸಮುದ್ರ. ಅದರ ಆಳದಲ್ಲಿಯೇ ಮುಳುಗಿದ ದೇವಸ್ಥಾನಗಳ ಪಟ್ಟಣ ಇದೆ. ಆದರೆ ಎಲ್ಲ ಆಯಾಮಗಳಲ್ಲಿ ಶಾಂತ ಮತ್ತು ಏಕಾಗ್ರಚಿತ್ತರಾದವರು ಮಾತ್ರ ಆ ನಾದವನ್ನು ಕೇಳಿಸಿಕೊಳ್ಳಬಹುದು.

ಆಲೋಚನೆಗಳು ಮತ್ತು ಬಯಕೆಗಳ ಅಲೆಗಳು ಹೃದಯದ ದಂಡೆಗಳಿಗೆ ಅಪ್ಪಳಿಸುವ ಸದ್ದೇ ಮೊರೆಯುತ್ತಿರುವಾಗ ಆ ಘಂಟೆಗಳ ಸದ್ದು ಕೇಳಿಸಲು ಹೇಗೆ ಸಾಧ್ಯ?’

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next