Advertisement

ತುಳುನಾಡ ಜಾತ್ರೆ, ಒಡಿಯೂರು ರಥೋತ್ಸವ

08:02 AM Feb 17, 2019 | |

ಒಡಿಯೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ದತ್ತಾಂಜನೇಯ ದೇವರ ಉತ್ಸವಮೂರ್ತಿ, ನವರತ್ನ ಖಚಿತ ಸ್ವರ್ಣಪಾದುಕೆಗಳ ಸಾಲಂಕೃತ ಒಡಿಯೂರು ರಥೋತ್ಸವ 2 ಗ್ರಾಮಗಳಲ್ಲಿ 12 ಕಿ.ಮೀ. ಸಂಚರಿಸುವ ಮೂಲಕ ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.

Advertisement

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತಾಂಜನೇಯ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಉತ್ಸವ ಮೂರ್ತಿಗೆ ಕುರೋಮೂಲೆ ವೇ| ಮೂ| ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಕಲ 
ವೈದಿಕ ವಿಧಿವಿಧಾನಗಳನ್ನು ನೆರವೇರಿಸಿ, ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಪೂಜೆ ನಡೆದ ಬಳಿಕ ರಥದಲ್ಲಿ ಆರೋಹಿಸಿ, ಮೆರವಣಿಗೆ ಆರಂಭವಾಯಿತು.

ಶ್ರೀ ಕ್ಷೇತ್ರದಿಂದ ಹೊರಟ ರಥಯಾತ್ರೆ ಮಿತ್ತನಡ್ಕ ಗ್ರಾಮ ದೈವಸ್ಥಾನ (ಮಿತ್ತನಡ್ಕ) ಕ್ಕೆ ಹೋಗಿ, ಕನ್ಯಾನದ ಶ್ರೀ ಗುರುದೇವ ಕಲ್ಯಾಣ ಮಂಟಪಕ್ಕೆ ತೆರಳಿ, ಅಲ್ಲಿ ಸದ್ಗುರು ಶ್ರೀ ನಿತ್ಯಾ ನಂದ ಮಂದಿರದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬಳಿಕ ಕನ್ಯಾನ ಪೇಟೆ ಸವಾರಿಯಾಗಿ ಶ್ರೀ ಸಂಸ್ಥಾನಕ್ಕೆ ಹಿಂದಿರುಗಿತು. ಮಿತ್ತನಡ್ಕ ದೈವ ಸ್ಥಾನ ಬಳಿಯಲ್ಲಿ ಹಿಂದೂ ಸೇವಾ ಸಮಿತಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ ಜರಗಿತು.

ರಥೋತ್ಸವಕ್ಕೆ ಮೆರುಗು ಚೆಂಡೆಮೇಳ, ಬ್ಯಾಂಡ್‌ ಸೆಟ್‌ ತಂಡ, ಬೊಂಬೆ ಪ್ರದರ್ಶನ ತಂಡ, ತಾಲೀಮು ಪ್ರದರ್ಶನ ತಂಡಗಳು ರಥೋತ್ಸವದ ಮೆರುಗು ಹೆಚ್ಚಿಸಿದವು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ನಗ್ರಿಗುತ್ತು ರೋಹಿತ್‌ ಡಿ. ಶೆಟ್ಟಿ ಪುಣೆ, ಶ್ರೀ ಗುರುದೇವ ಭಕ್ತವೃಂದ ಪ್ರಾಯೋಜಕತ್ವದ ಪ್ರಭಾವಳಿಗಳನ್ನೊಳಗೊಂಡ ಟ್ರಕ್ಕುಗಳು ಮೆಚ್ಚುಗೆಗೆ ಪಾತ್ರವಾದವು. ಸುಡುಮದ್ದು ಪ್ರದರ್ಶನ ಗಮನ ಸೆಳೆಯಿತು. ವಿವಿಧೆಡೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next