Advertisement

ಒಡಿಯೂರು ಶ್ರೀ ಮುಂಬಯಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

03:37 PM Jul 20, 2018 | Team Udayavani |

ಮುಂಬಯಿ: ದಕ್ಷಿಣದ ಗಾಣಗಾಪುರ ಎಂದೇ ಖ್ಯಾತಿ ಗಳಿಸಿದ ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂ ಇದರ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಜು. 27 ರಿಂದ ಆ. 5ರವರೆಗೆ ಮುಂಬಯಿ, ಥಾಣೆ, ನವಿಮುಂಬಯಿ ನಗರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಪಾದಪೂಜೆ, ಮುಂಬಯಿ ಘಟಕದ ವಾರ್ಷಿಕೋತ್ಸವ, ಸಾರ್ವಜನಿಕ ಗುರುವಂದನೆ ಕಾರ್ಯಕ್ರಮ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಜು. 17 ರಂದು ಸಯಾನ್‌ನ ಶ್ರೀ ನಿತ್ಯಾನಂದ ಸಭಾಗೃಹದಲ್ಲಿ ನಡೆಯಿತು.

Advertisement

ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಮುಂಬಯಿ ಘಟಕದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ವಿಕ್ರೋಲಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯಾಧ್ಯಕ್ಷೆ ರೇವತಿ ವಿ. ಶೆಟ್ಟಿ ಅವರು ಬಿಡುಗಡೆಗೊಳಿಸಿದರು.

ಘಟಕದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ ಅವರು ಮಾತನಾಡಿ, ಘಟಕದ ಈ ಬಾರಿಯ ವಾರ್ಷಿಕೋತ್ಸವ ಸಮಾರಂಭವು ಆ. 5 ರಂದು ಕುರ್ಲಾದ ಬಂಟರ ಭವನದಲ್ಲಿ ಮಧ್ಯಾಹ್ನ 2.30 ರಿಂದ ಪ್ರಾರಂಭಗೊಳ್ಳಲಿದ್ದು, ಸ್ವಾಮೀಜಿ, ಸಾಧ್ವಿ ಮಾತೆ ಶ್ರೀ ಮಾತಾನಂದಮಯಿ ಅವರ ಆಶೀರ್ವಚನದ ಬಳಿಕ ದೇವು ಪೂಂಜ ಐತಿಹಾಸಿಕ ತುಳು ನಾಟಕ ನಡೆಯ ಲಿದೆ. ಹೀಗೆ ಒಟ್ಟು ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಒಡಿಯೂರು ಕ್ಷೇತ್ರದ ಭಕ್ತರು ಸ್ವಾಮೀಜಿ ಅವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ನುಡಿದರು.

ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರು ಸ್ವಾಮೀಜಿಯ ವರ ಒಟ್ಟು ಕಾರ್ಯಕ್ರಮಗಳ ವಿವರವನ್ನು ಅವಲೋಕಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭೆಯಲ್ಲಿ ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ, ಶ್ಯಾಮ್‌ ಎನ್‌. ಶೆಟ್ಟಿ, ರಮೇಶ್‌ ಶೆಟ್ಟಿ ಸಿಬಿಡಿ, ದಾಮೋದರ ಶೆಟ್ಟಿ, ಪಿ. ಡಿ. ಶೆಟ್ಟಿ, ದಯಾನಂದ್‌ ಪೂಂಜ, ಸುರೇಶ್‌ ಎಲ್‌. ಶೆಟ್ಟಿ, ಕುಶಲಾ ಆರ್‌. ಶೆಟ್ಟಿ, ಕಲ್ಪನಾ ಕೆ. ಶೆಟ್ಟಿ, ಗುಣಪಾಲ್‌ ಶೆಟ್ಟಿ, ವನಜಾ ಶೆಟ್ಟಿ, ಚಂದ್ರಕಲಾ ಶೆಟ್ಟಿ ಮತ್ತು ಜಗದೀಶ್‌ ಶೆಟ್ಟಿ ಪನ್ವೇಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next