Advertisement

“ಸದ್ಗುಣ ಮೈಗೂಡಿಸಿಕೊಂಡಾಗ ಉತ್ಸವ ಅರ್ಥಪೂರ್ಣ’

07:35 AM Aug 27, 2017 | Team Udayavani |

ವಿಟ್ಲ : ಒಳ್ಳೆಯಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು ಎಂಬುದೇ ಗಣಪತಿತಣ್ತೀವಾಗಿದೆ. ಮನುಷ್ಯ ಉತ್ಸವಪ್ರಿಯ. ಉತ್ಸವಗಳು ಆತೊ¾àನ್ನತಿಗೆ ದಾರಿಯೂ ಹೌದು. ಆಚರಣೆಗಳು ಆತ್ಮರಂಜನೆಗೆ ಪೂರಕವಾಗಿರಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

Advertisement

ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನ ನೀಡಿದರು.

ಸ್ಥೂಲ ಶರೀರಕ್ಕೆ ಸೂಕ್ಷ್ಮಕಣ್ಣುಗಳನ್ನು ಹೊಂದಿರುವ ಗಣಪತಿಯ ಪ್ರತಿಯೊಂದು ಅಂಗಗಳಲ್ಲಿ ಒಂದೊಂದು ವಿಚಾರಗಳನ್ನು ಕಾಣಬಹುದು.  ದೆ„ವತ್ವವನ್ನು ಮೈಗೂಡಿಸಿಕೊಳ್ಳಬೇಕು ಎನ್ನುವುದೇ ಮಣ್ಣಿನ ಮೂರ್ತಿಯಲ್ಲಿ ಗಣಪತಿಯನ್ನು ಆವಾಹಿಸಿ ಪೂಜಿಸುವ ಉದ್ದೇಶವಾಗಿದೆ ಎಂದವರು ಹೇಳಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಅವರು ಉಪಸ್ಥಿತರಿದ್ದರು. ವೇ| ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಮತ್ತು ಬಳಗದವರಿಂದ ಶ್ರೀ ಗಣಪತಿ ಅಥರ್ವಶೀರ್ಷ ಹವನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next