Advertisement

ಸೌರ ಶಕ್ತಿಯಿಂದ ಶೀಘ್ರ ಒಡಿಶಾದ ಸೂರ್ಯದೇಗುಲ ಪ್ರಕಾಶಮಯ

09:59 PM Oct 25, 2022 | Team Udayavani |

ಕೊನಾರ್ಕ್‌: ಒಡಿಶಾದ ಸೂರ್ಯ ದೇಗುಲ ಮತ್ತು ಕೊನಾರ್ಕ್‌ ಪಟ್ಟಣವು ಏಪ್ರಿಲ್‌ನಿಂದ ಸಂಪೂರ್ಣ ಸೌರ ಶಕ್ತಿಯಿಂದ ಪ್ರಕಾಶಿಸಲಿದೆ.

Advertisement

13ನೇ ಶತಮಾನದ ಈ ಸೂರ್ಯ ದೇಗುಲ ಮತ್ತು ಅಲ್ಲಿನ ಪಟ್ಟಣವನ್ನು ಸೌರವಿದ್ಯುದೀಕರಣ ಮಾಡಲು ಕಳೆದ ವರ್ಷ ಕೇಂದ್ರ ಸರ್ಕಾರವು ಯೋಜನೆಯೊಂದನ್ನು ಆರಂಭಿಸಿತು.

ಕೊನಾರ್ಕ್‌ ಸೂರ್ಯ ದೇಗುಲ ಮತ್ತು ಕೊನಾರ್ಕ್‌ ಪಟ್ಟಣವನ್ನು ಶೇ.100 ಪ್ರತಿಶತ ಸೌರ ವಿದ್ಯುದೀಕರಣದ ನಿಟ್ಟಿನಲ್ಲಿ ನೂತನ ಮತ್ತು ನವೀಕರಿಸಲಾದ ಇಂಧನ ಸಚಿವಾಲಯದ ಯೋಜನೆಯಡಿಯಲ್ಲಿ 10 ಮೆಗಾವ್ಯಾಟ್‌ ಸೌರ ವಿದ್ಯುತ್‌ ಖರೀದಿಗಾಗಿ ಕೋನಾರ್ಕ್‌ ಸೂರ್ಯನಾಗ್ರಿ ಪ್ರೈವೇಟ್‌ ಲಿಮಿಟೆಡ್‌ನೊಂದಿಗೆ ವಿದ್ಯುತ್‌ ಖರೀದಿ ಒಪ್ಪಂದಕ್ಕೆ(ಪಿಪಿಎ) ಸಹಿ ಹಾಕಿರುವುದಾಗಿ ಒಡಿಶಾದ ಗ್ರಿಡ್‌ ಕಾರ್ಪೊರೇಶನ್‌(ಗ್ರಿಡ್‌ಕೊ) ಟ್ವೀಟ್‌ ಮೂಲಕ ತಿಳಿಸಿದೆ.

2023-24 ಹಣಕಾಸು ವರ್ಷದಿಂದ ಮುಂದಿನ 25 ವರ್ಷಗಳವರೆಗೆ ಯಾವುದೇ ಕೇಂದ್ರ ವಲಯದ ಪ್ರಸರಣ ಶುಲ್ಕಗಳು ಮತ್ತು ನಷ್ಟಗಳಿಲ್ಲದೆ ಪ್ರತಿ ಗಂಟೆಗೆ ಒಂದು ಕಿಲೋವ್ಯಾಟ್‌ಗೆ 2.77 ರೂ. ದರದಲ್ಲಿ ಸೌರ ವಿದ್ಯುತ್‌ ಲಭ್ಯವಿರುತ್ತದೆ ಎಂದು ಗ್ರಿಡ್‌ಕೊ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next