ಕಟಕ್: ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಬಳಲಿರುವ ವಕೀಲರೊಬ್ಬರು ಬೇರೆ ದಾರಿ ಕಾಣದೆ ಆದಾಯಕ್ಕಾಗಿ ಒಡಿಶಾ ಕೋರ್ಟಿನ ಮುಂದೆಯೇ ತರಕಾರಿ ಮಾರಾಟಕ್ಕೆ ಮುಂದಾಗಿದ್ದಾರೆ.
ಸಪನ್ ಕುಮಾರ್‌ಪಾಲ್ ಎಂಬುವವರು ಕಳೆದ 8 ವರ್ಷಗಳಿಂದ ವಕೀಲ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಜರ್ಜರಿತರಾದರು. ನೆರವಿಗೆ ಒಡಿಶಾ ಬಾರ್ ಕೌನ್ಸಿಲ್‌ಗೆ ಅರ್ಜಿ ಸಲ್ಲಿಸಿದರು. ಆದರೆ, ನಿರೀಕ್ಷಿತ ನೆರವು ದೊರೆಯದೇ ಇದ್ದುದರಿಂದ ಗೆಳೆಯನಿಂದ ಒಂದು ಸಾವಿರ ರೂ. ಸಾಲ ಪಡೆದು ಬಾರ್ ಕೌನ್ಸಿಲ್ ಕಚೇರಿ ಎದುರೇ ತರಕಾರಿ ಮಾರಾಟ ಮಾಡುತ್ತಿದ್ದಾರೆ.
“”ಬಾರ್ ಕೌನ್ಸಿಲ್‌ಗೆ ಸಂದೇಶ ಕಳುಹಿಸಲು ತರಕಾರಿ ಮಾರುತ್ತಿದ್ದೇನೆ. ಅಲ್ಲದೇ ಬಡ ವಕೀಲರಿಗೆ ಆರ್ಥಿಕ ನೆರವು ನೀಡದೇ ಇದ್ದರೆ ತರಕಾರಿ ಮಾರಾಟ ಮಾಡದೇ ಬೇರೆ ದಾರಿ ಇಲ್ಲ ಎನ್ನುವ ಸೂಚನೆಯೂ ರವಾನಿಸಿದಂತಾಗುತ್ತದೆ” ಎಂದು ಹೇಳಿದ್ದಾರೆ.
ಒಡಿಶಾದ ನಾನಾ ವಕೀಲ ಸಂಘ ದಿಂದ 15 ಸಾವಿರ ಅರ್ಜಿಗಳು ಬಂದಿವೆ. ಲಾಕ್ ಡೌನ್‌ನಿಂದ ಉದ್ಯೋಗಿಗಳು ಕೆಲಸಕ್ಕೆ ಬಾರದೆ ಹಣ ಬಿಡುಗಡೆ ನಿಧಾನವಾಗಿದೆ.
– ಸಮಂತಶಿಂಗಾರ್, ಬಾರ್ ಕೌನ್ಸಿಲ್ ಕಾರ್ಯದರ್ಶಿ